ಭಾರತ, ಏಪ್ರಿಲ್ 28 -- ಭಾರತದಲ್ಲಿ ಕ್ರಿಕೆಟ್​ ಅತ್ಯಧಿಕ ಜನಪ್ರಿಯತೆ ಹೊಂದಿರುವ ಕ್ರೀಡೆ. ಗಲ್ಲಿಯಿಂದ ಹಿಡಿದು ದಿಲ್ಲಿ ತನಕ, ಕಿರಿಯರಿಂದ ಹಿಡಿದು ಹಿರಿಯರ ತನಕ ಎಲ್ಲರಿಗೂ ನೆಚ್ಚಿನ ಆಟವಾಗಿದೆ. ಅದು ಭಾರತದ ಪಂದ್ಯಗಳೇ ಇರಲಿ ಅಥವಾ ಐಪಿಎಲ್ ಇರಲಿ, ಅಭಿಮಾನಿಗಳ ಕ್ರೇಜ್​ ಅಷ್ಟಿಷ್ಟಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡ ಅಥವಾ ಆಟಗಾರನ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಸಾಕಷ್ಟು ಉತ್ಸುಕತೆ ತೋರುತ್ತಾರೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಈ ಆಟದ ಪ್ರತಿಯೊಂದು ಕ್ಷಣವೂ ರೋಮಾಂಚನದಿಂದ ಕೂಡಿರುತ್ತದೆ. ಆದರೆ ಈ ಆಟಕ್ಕೆ ಸಂಬಂಧಿಸಿದ ಹಲವು ನಿಗೂಢ ಒಗಟುಗಳಿವೆ, ಅದರ ಬಗ್ಗೆ ಕೆಲವೇ ಅಭಿಮಾನಿಗಳಿಗೆ ತಿಳಿದಿದೆ. ಅಂತಹ ಒಂದು ಒಗಟು ಡಬಲ್ ಹ್ಯಾಟ್ರಿಕ್​ನದ್ದು.

ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳನ್ನು ಹ್ಯಾಟ್ರಿಕ್ ಎಂದರೇನು ಎಂದು ಕೇಳಿದರೆ, ಅವರು ಸತತ 3 ಎಸೆತಗಳಲ್ಲಿ ವಿಕೆಟ್ ಪಡೆಯುವುದನ್ನು ಹ್ಯಾಟ್ರಿಕ್ ಎಂದು ಕರೆಯುತ್ತಾರೆ ಎಂದು ಉತ್ತರಿಸುತ್ತಾರೆ. ಹೀಗಾಗಿ, ಡಬಲ್ ಹ್ಯಾಟ್ರಿಕ್ ವಿಷಯಕ್ಕೆ ಬಂದಾಗ ಮನಸ್ಸಿಗೆ ಬರುವುದು ಓವರ್...