ಭಾರತ, ಏಪ್ರಿಲ್ 23 -- ಐಪಿಎಲ್‌ 18ನೇ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿದ ಮುಂಬೈ ಇಂಡಿಯನ್ಸ್‌ (Sunrisers Hyderabad vs Mumbai Indians) ತಂಡವು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಹೈದರಾಬಾದ್‌ನಲ್ಲಿ ಅಬ್ಬರಿಸಿದ ಹಾರ್ದಿಕ್‌ ಪಾಂಡ್ಯ ಬಳಗವು, ಗೆಲುವಿನ ಹಳಿಯಲ್ಲಿ ಸಲೀಸಾಗಿ ಓಡುತ್ತಿದೆ. ಪಂದ್ಯದಲ್ಲಿ ಮೊದಲು ಬೌಲರ್‌ಗಳು ಮ್ಯಾಜಿಕಲ್‌ ಪ್ರದರ್ಶನ ನೀಡಿದರೆ, ಆ ಬಳಿಕ ರೋಹಿತ್‌ ಶರ್ಮಾ ಸಿಡಿದೆದ್ದರು. ಸತತ ಎರಡನೇ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಅನುಭವಿ ಆಟಗಾರ, ತಂಡದ ಗೆಲುವನ್ನು ಸರಳಗೊಳಿಸಿದರು.

ಸನ್‌ರೈಸರ್ಸ್‌ ಆರಂಭವೇ ಕಳಪೆಯಾಗಿತ್ತು. ಟ್ರಾವಿಸ್‌ ಹೆಡ್‌ 0 ಸಂಪಾದಿಸಿದರೆ, ಅವರ ಬೆನ್ನಲ್ಲೇ ಇಶಾನ್‌ ಕಿಶನ್‌ ನಾಟಕೀಯ ರೀತಿಯಲ್ಲಿ 1 ರನ್‌ ಗಳಿಸಿದ್ದಾಗ ಔಟ್‌ ಆದರು. ಅಭಿಷೇಕ್‌ ಶರ್ಮಾ 8 ರನ್‌ ಗಳಿಸಿದರೆ, ನಿತೀಶ್‌ ರೆಡ್ಡಿ ಗಳಿಕೆ 2 ರನ್‌ ಮಾತ್ರ. ಈ ವೇಳೆ ತಂಡಕೆ ಚೇತರಿಕೆ ಕೊಟ್ಟಿದ್ದು ಕ್ಲಾಸೆನ್.‌ ಅಬ್ಬರಿಸಿದ ದಕ್ಷಿಣ ಆಫ್ರಿಕಾ ದೈತ್ಯ 44 ...