जयपुर, ಏಪ್ರಿಲ್ 22 -- ಏಪ್ರಿಲ್ 24ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ಸತತ ಸೋಲಿನಿಂದ ಕಂಗೆಟ್ಟಿರುವ ರಾಜಸ್ಥಾನ್ ರಾಯಲ್ಸ್​ಗೆ ಮತ್ತೆ ಹಿನ್ನಡೆಯಾಗಿದೆ. ಆರ್​ಆರ್​ ನಾಯಕ ಸಂಜು ಸ್ಯಾಮ್ಸನ್ ಮತ್ತೆ ಗಾಯಗೊಂಡಿದ್ದು, ಮುಂದಿನ ಪಂದ್ಯಕ್ಕೆ ಅವರು ಆಡುವುದಿಲ್ಲ ಎಂದು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ದೃಢಪಡಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿದ್ದ ಸ್ಯಾಮ್ಸನ್​ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ರಾಯಲ್ಸ್​ನ​ ತವರು ಪಂದ್ಯಕ್ಕೆ ಹೊರಗುಳಿದಿದ್ದ ಸಂಜು, ಗುರುವಾರ ಆರ್​ಸಿಬಿ ಎದುರಿನ ಕದನಕ್ಕೂ ಹೊರಗುಳಿಯಲಿದ್ದಾರೆ. ಸ್ಯಾಮ್ಸನ್ ಮರಳುವ ದಿನಾಂಕವನ್ನು ರಾಯಲ್ಸ್ ವೈದ್ಯಕೀಯ ಸಿಬ್ಬಂದಿ ನಿಗದಿಪಡಿಸಿಲ್ಲ. ಅವರು ಚೇತರಿಕೆ ಕಾಣುತ್ತಿದ್ದು, ಆರ್​ಆರ್​ ವೈದ್ಯಕೀಯ ಸಿಬ್ಬಂದಿಯೊಂದಿಗೆ ತಂಡದ ತವರು ನೆಲೆಯಲ್ಲೇ ಉಳಿಯಲಿದ್ದಾರೆ ಎಂದು ರಾಯಲ್ಸ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ. ಸ್ಯಾಮ್ಸನ್ ಪುನಶ್ಚೇತನ...