ಭಾರತ, ಏಪ್ರಿಲ್ 11 -- 2025ರ ಐಪಿಎಲ್​ನಲ್ಲಿ ಸತತ ನಾಲ್ಕು ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್​ಗೆ ಗಾಯದ ಮೇಲೆ ಬರೆ ಬಿದ್ದಿದೆ. ತಮ್ಮ ನಾಯಕ ಋತುರಾಜ್ ಗಾಯಕ್ವಾಡ್ ಗಾಯಗೊಂಡು ಇಡೀ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಇದೀಗ ಮೂರನೇ ಬಾರಿಗೆ ಎಂಎಸ್ ಧೋನಿ ಸಿಎಸ್​ಕೆ ನಾಯಕತ್ವ ವಹಿಸಿಕೊಂಡಿದ್ದಾರೆ. ತವರಿನ ಚೆಪಾಕ್ ಮೈದಾನದಲ್ಲಿ ಸತತ ಎರಡು ಪಂದ್ಯಗಳನ್ನು ಕಳೆದುಕೊಂಡಿರುವ ಚೆನ್ನೈ, ಧೋನಿ ಕ್ಯಾಪ್ಟನ್ಸಿಯಲ್ಲಿ ಹ್ಯಾಟ್ರಿಕ್ ಸೋಲು ತಪ್ಪಿಸಿಕೊಳ್ಳುವ ಇರಾದೆಯಲ್ಲಿದೆ.

ಇಂದು (ಏಪ್ರಿಲ್ 11) ಶುಕ್ರವಾರದ ಚೆನ್ನೈನ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಧೋನಿ ಸಾರಥ್ಯಕ್ಕೆ ಸವಾಲಾಗಲು ಸಜ್ಜಾಗಿದೆ. ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಕೂಡ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿರುವ 5ರಲ್ಲಿ 2 ಗೆಲುವು, 3 ಸೋಲಿಗೆ ಶರಣಾಗಿದೆ. ಮತ್ತೊಂದೆಡೆ ಸಿಎಸ್​ಕೆ ಈವರೆಗೂ ಗೆದ್ದಿರುವುದು ಒಂದನ್ನಷ್ಟೆ. 4ರಲ್ಲಿ ಮಕಾಡೆ ಮಲಗಿದೆ. ಹೀಗಾಗಿ ಧೋನಿ ಮುಂದಾಳತ್ವದಲ್ಲಿ ಯೆಲ್ಲೋ ಆರ್ಮಿಗೆ ಬೂಸ್ಟ್ ಸಿಗ...