ಭಾರತ, ಮಾರ್ಚ್ 30 -- ಐಪಿಎಲ್‌ 2025ರ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವು ಸತತ ಎರಡನೇ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ 1 ವಿಕೆಟ್‌ ಜಯ ಸಾಧಿಸಿದ್ದ ತಂಡವು, ಇದೀಗ ಸನ್‌ರೈಸರ್ಸ್‌ ವಿರುದ್ಧದ ಎರಡನೇ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಒಲಿಸಿಕೊಂಡಿದೆ. ವಿಶಾಖಪಟ್ಟಣದಲ್ಲಿ ನಡೆದ ಪಂದ್ಯದಲ್ಲಿ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಆರ್ಭಟಿಸಿದ ಡೆಲ್ಲಿ ಆಟಗಾರರು, ಅರ್ಹ ಗೆಲುವು ಸಾಧಿಸಿದರು. ಅತ್ತ ಬ್ಯಾಟಿಂಗ್‌ನಲ್ಲಿ ಅನಿರೀಕ್ಷಿತ ಕುಸಿತ ಕಂಡ ಎಸ್‌ಆರ್‌ಎಚ್‌ ತಂಡವು, ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸಿದೆ.

ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌, ನಿರೀಕ್ಷೆಯಂತೆ ಅಬ್ಬರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೇವಲ 163 ರನ್‌ಗಳಿಗೆ ಆಲೌಟ್‌ ಆಯ್ತು. ಸ್ಪರ್ಧಾತ್ಮಕ ಮೊತ್ತ ಸುಲಭವಾಗಿ ಚೇಸಿಂಗ್‌ ನಡೆಸಿದ ಡೆಲ್ಲಿ, ಕೇವಲ 16 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 166 ರನ್‌ ಗಳಿಸಿ ಗುರಿ ತಲುಪಿತು.

ಸನ್‌ರೈಸ...