ಭಾರತ, ಫೆಬ್ರವರಿ 7 -- ಮಧು ವೈಎನ್‌ ಬರಹ: ಮಾಯಾ ಏಂಜೆಲೋ ಅವರದ್ದು ಒಂದು ಫೇಮಸ್‌ ಕೋಟ್‌ ಇದೆ. ಜನ ತಮ್ಮ ಮೊದಲ ಪರಿಚಯದಲ್ಲೇ ಅವರು ಏನು ಎಂದು ತೋರಿಸಿರುತ್ತಾರೆ. ನಾವು ನಂಬಕ್ಕೆ ರೆಡಿಯಿರಲ್ಲ ಅಷ್ಟೇ ಅಂತ. ತುಂಬಾ ಜನ ಸೋಶಿಯಲ್‌ ಮೀಡಿಯಾದಲ್ಲಿ ತುಂಬ ದೊಡ್ಡ ದೊಡ್ಡದಾಗಿ ಬರ್ಕೊಂಡು ಕೇರ್‌ಫುಲಿ ಕ್ರಾಫ್ಟೆಡ್ಡಾದ ಇಮೇಜು ಕಟ್ಟಿಕೊಂಡಿರ್ತಾರೆ. ಒಂದೊಂದೇ ಇಟ್ಟಿಗೆ ಜೋಡಿಸ್ಕೊಂಡು. ನಮಗೆ ಅದೇ ನಿಜ ವ್ಯಕ್ತಿತ್ವ ಅನಿಸಿಬಿಟ್ಟಿರುತ್ತೆ. ಆದರೆ ಅಂಥವರು ನಿಜವಾದ ವ್ಯಕ್ತಿಯಾಗಿ ಸಿಗುವುದು ಸೋಶಿಯಲ್‌ ಮೀಡಿಯಾ ಹೊರಗೆ. ತಮ್ಮ ತಮ್ಮ ಸ್ನೇಹಿತರ ನಡುವೆ ನಡಯುವ ಹರಟೆಯಲ್ಲಿ . ಆಪ್ತರಿಗೆ ಕಳಿಸುವ ವಾಟ್ಸಾಪಿನಲ್ಲಿ. ಸಿಟ್ಟಿನಲ್ಲಿ, ದುಃಖದಲ್ಲಿ. ಹ್ಞಾ.. ಮುಖವಿಲ್ಲದ ಪ್ರೊಫೈಲುಗಳಲ್ಲಿ. ಅದೂ ಅಷ್ಟೇ. ಆರಾಮಾಗಿ ಸಿದ್ಧರಾಮಯ್ಯನವರ ಅಥವಾ ಮೋದಿಯವರ ಅಕೌಂಟಿಗೆ ಹೋಗಿ ಲೌಡಾ ಅಂದು ಬರಬಹುದು. ರಶ್ಮಿಕಾ ಮಂದಣ್ಣಂಗೆ ಡ...ರ್‌ ಅನ್ನಬಹುದು. (ಸೊಲ್ಪ ದಿವಸಗಳ ಹಿಂದೆ ನನ್ನ ಒಂದು ಪೋಸ್ಟಿಗೆ ವಯಸಾದ ವ್ಯಕ್ತಿ ಬಂದು ಅಬ್ಬೆಪಾರಿ ಲೇಖನ ಅಂದಿದ್ದು ನೆನಪಾಗ್...