Vijayapura, ಮಾರ್ಚ್ 27 -- ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಯೋಜನೆಯೂ ಸೇರಿದಂತೆ ಹಲವು ಯೋಜನೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ನೀಗಿಸಲು ರಾಜ್ಯದ ಪ್ರಮುಖ ಜಲಾಶಯಗಳನ್ನು ನಿರ್ವಹಣೆ ಹಾಗೂ ಕುಡಿಯುವ ನೀರಿಗೆ ವಿಶೇಷ ಒತ್ತು ಕೊಟ್ಟು ನಿರ್ವಹಣೆ ಮಾಡಲು ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ತಾಂತ್ರಿಕ ವ್ಯಕ್ತಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲು ಸಚಿವ ಸಂಪುಟ ಅನುಮೋದಿಸಿದೆ

ಮುಖ್ಯವಾಗಿ ವಿಜಯಪುರ ನಗರಕ್ಕೆ ಆಲಮಟ್ಟಿಯಿಂದ ಸುಸೂತ್ರವಾಗಿ ಕುಡಿಯುವ ನೀರು ಸರಬರಾಜು ಮಾಡಲು ಪೈಪ್‌ಲೈನ್‌ಗಳಲ್ಲಿ ಭಾರೀ ಬದಲಾವಣೆ ಮಾಡುವುದಕ್ಕೂ ಒಪ್ಪಿಗೆ ಕೊಡಲಾಗಿದೆ.

ವಿಜಯಪುರ ಜಿಲ್ಲೆಯಲ್ಲಿ ವಿಯಜಪುರ ನಗರಕ್ಕೆ ಆಲಮಟ್ಟಿಯಿಂದ ಪಿಎಸ್‌ಸಿ ಕೊಳವೆ ಮಾರ್ಗವನ್ನು ಬದಲಾಯಿಸಿ ಎಂಎಸ್ ಪೈಪ್ ಅಳವಡಿಸುವ 50.13 ಕೋಟಿ ರೂ.ಗಳ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ.

ವಿಜಯಪುರ ಸೇರಿದಂತೆ ಕುಡಿಯುವ ನೀರಿಗೆ ಆಗುವ ಸಮಸ್ಯೆಗಳ ಕುರಿತಂತೆ ಹಾಗೂ ಜಲಾಶಯಗಳಿಂದ ನೀರು ಬಿಡುಗಡೆ ನಿರ್ವಹಣೆ ಮಾಡಲು ಸಮಿತಿಯು ವಿ...