Bengaluru, ಮಾರ್ಚ್ 27 -- Bharathi Teacher: ಶೀರ್ಷಿಕೆಯ ಮೂಲಕವೇ ಇತರರ ಗಮನ ಸೆಳೆಯುವ ನಿಟ್ಟಿನಲ್ಲಿ ಹೊಸಬರ ತಂಡಗಳು ಹೊಸ ಹೊಸ ಪ್ರಯತ್ನ ಮಾಡುತ್ತಿವೆ. ಅದರಂತೆ ಇದೀಗ ಹೆಸರಿನಲ್ಲೇ ಆಕರ್ಷಣೆ, ಕುತೂಹಲ ಮೂಡಿಸುತ್ತಿದೆ ʻಭಾರತಿ ಟೀಚರ್ ಏಳನೇ ತರಗತಿʼ ಸಿನಿಮಾ. ಇತ್ತೀಚೆಗಷ್ಟೇ ಈ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಸಿರಗುಪ್ಪ ಮೂಲದ ಉದ್ಯಮಿ ರಾಘವೇಂದ್ರ ರೆಡ್ಡಿ, ಪೂಜ್ಯಾಯ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ದೇಶನವನ್ನು ಎಂ.ಎಲ್.ಪ್ರಸನ್ನ ನಿರ್ವಹಿಸಿದ್ದಾರೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಕುರಿತು ಮಾತನಾಡಿದ ಸಚಿವ ಸಂತೋಷ್ ಲಾಡ್, "ಚಿತ್ರದ ಸಾರಾಂಶ ಇಷ್ಟವಾಯಿತು. ನನಗೆ ಡಿಸಿ ಪಾತ್ರ ಮಾಡಬೇಕೆಂದು ಕೇಳಿಕೊಂಡಿದ್ದಾರೆ. ನಿರ್ದೇಶಕರೊಂದಿಗೆ ಇಲ್ಲಿ ಕೆಲಸ ಮಾಡುವುದು ಇಷ್ಟವಾಗಿದೆ. ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಎಂಬ ನಂಬಿಕೆಯ ಜತೆ ಭಯ ಕೂಡ ಇದೆ. ಇದು ಒಂದು ಒಳ್ಳೆಯ ಸಂದೇಶ ಇರುವ ಚಿತ್ರವಾಗ...