Vijayapura, ಮೇ 19 -- ಕರ್ನಾಟಕದ ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಪುತ್ರ ಧ್ರುವ ಎಂ ಪಾಟೀಲ ಅಮೆರಿಕಾದ ನ್ಯೂಯಾರ್ಕ್‌ ವಿಶ್ವವಿದ್ಯಾನಿಲಯದ ಟಾಪರ್‌ ಎನ್ನಿಸಿದ್ದಾರೆ.

ಬಿ ಎಲ್ ಡಿ ಇ ಸಂಸ್ಥೆ ಅಧ್ಯಕ್ಷರೂ ಅಗಿರುವ ಸಚಿವ ಎಂ ಬಿ ಪಾಟೀಲ ಅವರ ಕಿರಿಯ ಪುತ್ರನಾಗಿರುವ ಧ್ರುವ ಎಂ ಪಾಟೀಲ ಅಮೆರಿಕಾದ ನ್ಯೂಯಾರ್ಕ್ ವಿವಿಯಲ್ಲಿ ಬ್ಯಾಚರ್ ಆಫ್ ಸೈನ್ಸ್ ಪದವಿಯನ್ನು ನ್ಯೂಯಾರ್ಕ್ ವಿವಿಗೆ ಟಾಫ್ 5 ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದು, ದಿ 15ರಂದು ನಡೆದ ಘಟಿಕೋತ್ಸವದಲ್ಲಿ ಇವರಿಗೆ ಪದವಿ ಪ್ರದಾನ ಮಾಡಲಾಯಿತು.

ಎಂಬಿ ಪಾಟೀಲ ಅವರ ಹಿರಿಯ ಪುತ್ರ ಬಸನಗೌಡ ಪಾಟೀಲ ಕೂಡ ವಿದೇಶದಲ್ಲಿಯೇ ವ್ಯಾಸಂಗ ಮಾಡಿ ಈಗ ಬಿಎಲ್‌ಡಿಒ ಡೀಮ್ಡ್‌ ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿದ್ದು, ಎರಡನೇ ಮಗ ಕೂಡ ಉನ್ನತ ವ್ಯಾಸಂಗ ಮುಗಿಸಿದ್ದಾರೆ.

ವನ್ಯ ಜೀವಿ ರಕ್ಷಣೆ, ಪರಿಸರ ಜಾಗೃತಿ, ಬೀದಿ ಬದಿ ಪ್ರಾಣಿಗಳ ರಕ್ಷಣೆ ಕುರಿತು ಸದಾ ಮುಂದಿರುವ ಧ್ರುವ ಎಂ ಪಾಟೀಲ ಅತ್ಯುತ್ತಮ ಛಾಯಾಚಿತ್ರಕಾರರಾಗಿದ್ದಾರೆ. ಅಲ್ಲದೆ, ಸೊಸೈಟಿ ಫಾರ್ ಪ್ರೊಟೆಕ್ಷನ್ ಆಫ್ ...