ಭಾರತ, ಏಪ್ರಿಲ್ 17 -- ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಮೂರು ತಿಂಗಳ ಬಳಿಕ ಅಪಘಾತವೆಸಗಿದ ಲಾರಿ ಚಾಲಕನನ್ನು ಕಿತ್ತೂರು ಪೊಲೀಸರು ಬಂಧಿಸಿದ್ದಾರೆ. ಆರಂಭದಲ್ಲಿ ಕಾರು ಅಪಘಾತಕ್ಕೆ ಕಾರಣವೇನು ಎಂಬುದು ಸರಿಯಾಗಿ ಗೊತ್ತಾಗಿರಲಿಲ್ಲ. ಆದರೆ ತನಿಖೆ ಬಳಿಕ ಲಾರಿ ಅಪಘಾತವೆಸಗಿ ಪರಾರಿಯಾಗಿದ್ದು ಬೆಳಕಿಗೆ ಬಂದಿತ್ತು. ಇದೀಗ ಲಾರಿ ಚಾಲಕನ ಬಂಧನವು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತ ಕೇಸ್‌ಗೆ ಟ್ವಿಸ್ಟ್ ನೀಡಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತವಾಗಿ ಮೂರು ತಿಂಗಳ ಬಳಿಕ ಅಪಘಾತವೆಸಗಿದ ಲಾರಿ ಚಾಲಕನ ಬಂಧನವಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಾರು ಜನವರಿ 14 ರಂದು ಮುಂಜಾನೆ 5 ಗಂಟೆಗೆ ಕಿತ್ತೂರು ಸಮೀಪ ಅಪಘಾತಕ್ಕೀಡಾಗಿತ್ತು. ವಿವಿಧ ಆಯಾಮಗಳಲ್ಲಿ ಕೇಸ್‌ನ ತನಿಖೆ ನಡೆಸಿದ ಪೊಲೀಸರು ಅಪಘಾತವೆಸಗಿದ ಲಾರಿ ಮತ್ತು ಅದರ ಚಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಧುಕರ ಸೋಮವಂಶಿ ಎಂ...