ಭಾರತ, ಮೇ 26 -- ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಸೋಮವಾರ (ಮೇ 26) ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಮುಂಬೈ ಇಂಡಿಯನ್ಸ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಐತಿಹಾಸಿಕ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ತಮ್ಮ ಅದ್ಭುತ ಓಟವನ್ನು ಮುಂದುವರೆಸಿದ ಸೂರ್ಯ, 39 ಬಾಲ್ಗಳಲ್ಲಿ 156.15 ಸ್ಟ್ರೈಕ್ ರೇಟ್ನಲ್ಲಿ 6 ಬೌಂಡರಿ, 2 ಸಿಕ್ಸರ್‌ಗಳೊಂದಿಗೆ 57 ರನ್ ಗಳಿಸುವ ಮೂಲಕ ಋತುವಿನ 5ನೇ ಅರ್ಧಶತಕ ಬಾರಿಸಿದರು.
ಪ್ರಸಕ್ತ ಐಪಿಎಲ್ನಲ್ಲಿ ಸೂರ್ಯ ಆಡಿದ ಲೀಗ್ ಹಂತದ ಎಲ್ಲಾ (14) ಪಂದ್ಯಗಳಲ್ಲೂ 25 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ನಲ್ಲಿ ಈ ಸಾಧನೆ ಮೊಟ್ಟ ಮೊದಲ ಆಟಗಾರ.
ಅಲ್ಲದೆ, ವಿಶ್ವದಾಖಲೆಯನ್ನೂ ತನ್ನ ಹೆಸರಿಗೆ ಸೂರ್ಯ ಬರೆದುಕೊಂಡಿದ್ದಾರೆ. ಸತತವಾಗಿ 14 ಟಿ20 ಇನ್ನಿಂಗ್ಸ್ಗಳಲ್ಲಿ 25 ಪ್ಲಸ್ ರನ್ ಗಳಿಸಿದ ಆಟಗಾರ ಎಂಬ ವಿಶ್ವದ ಮೊದಲ ಆಟಗಾರನೂ ಅವರೇ ಆಗಿದ್ದಾರೆ. ಆ ಮೂಲಕ ಟೆಂಬಾ ಬವುಮಾ ವಿಶ್ವದಾಖಲೆ ಮುರಿದಿದ್ದಾರೆ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.