ಭಾರತ, ಏಪ್ರಿಲ್ 27 -- ಭಾರತೀಯ ಕ್ರಿಕೆಟ್‌ ಕಂಡ ದಿಗ್ಗಜರಲ್ಲಿ ಸಚಿನ್‌ ತೆಂಡೂಲ್ಕರ್‌ ಮತ್ತು ಸೌರವ್‌ ಗಂಗೂಲಿಗೆ ಅಗ್ರಪಂಕ್ತಿ. ಸಚಿನ್‌ 'ಕ್ರಿಕೆಟ್ ದೇವರು' ಎಂದೇ ಜನಪ್ರಿಯರು. ಅತ್ತ ಬಿಸಿಸಿಐ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ, ಕ್ರಿಕೆಟಿಗನಾಗಿ ಹಲವು ದಾಖಲೆಗಳ ಜೊತೆಗೆ, ಬಿಸಿಸಿಐ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿದವರು. ಈಗಲೂ ಕ್ರಿಕೆಟ್‌ ವಿಷಯವಾಗಿ ಆಗಾಗ ಇಬ್ಬರೂ ಮುನ್ನೆಲೆಗೆ ಬರುತ್ತಾರೆ. ಇವರಿಗೆ ಭಾರತ ಮಾತ್ರವಲ್ಲದೆ ವಿದೇಶಗಳಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಸೆಲೆಬ್ರಿಟಿಗಳಾದ ಮೇಲೆ ಅವರ ಕುಟುಂಬ ಸದಸ್ಯರು ಕೂಡಾ ಹೆಚ್ಚು ಜನಪ್ರಿಯರಾಗುವುದು ಸಾಮಾನ್ಯ. ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಹಾಗೂ ಗಂಗೂಲಿ ಪುತ್ರಿ ಸನಾ ಗಂಗೂಲಿ ಕೂಡಾ ಫೇಮಸ್. ಹಾಗಂತಾ ಇವರಿಬ್ಬರೂ ಕ್ರಿಕೆಟ್‌ ಆಡುತ್ತಿಲ್ಲ. ಆದರೆ, ಅವರದ್ದೇ ಆಸಕ್ತಿಯ ಕ್ಷೇತ್ರಗಳಲ್ಲಿ ಜನಪ್ರಿಯರಾಗಿದ್ದಾರೆ.

1997ರಲ್ಲಿ ಜನಿಸಿದ ಸಾರಾ ತೆಂಡೂಲ್ಕರ್‌ ವಯಸ್ಸು ಈಗ 27 ವರ್ಷ. ಇದೇ ವೇಳೆ 2001ರಲ್ಲಿ ಜನಸಿದ ಸನಾ ಗಂಗೂಲಿ ವಯಸ್ಸು 23 ವರ್ಷ. ಇವರಿಬ್ಬರೂ ತಮ್ಮ ತ...