ಬೆಂಗಳೂರು, ಮೇ 23 -- ಜಿಂಬಾಬ್ವೆ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಆಟಗಾರ ಜೋ ರೂಟ್ ವಿಶೇಷ ಮೈಲಿಗಲ್ಲು ತಲುಪಿದ್ದಾರೆ. ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ಗುರುವಾರ (ಮೇ 22) ನಡೆದ ಮೊದಲ ದಿನದಾಟದಲ್ಲಿ ಜೋ ರೂಟ್ ತಮ್ಮ ಹೆಸರನ್ನು ಇತಿಹಾಸ ಪುಸ್ತಕಗಳಲ್ಲಿ ಬರೆದಿದ್ದಾರೆ. 2025ರಲ್ಲಿ ಮೊದಲ ಬಾರಿಗೆ ರೆಡ್-ಬಾಲ್ ಕ್ರಿಕೆಟ್ ಆಡಿದ ರೂಟ್, ಪಂದ್ಯದಲ್ಲಿ 34 ರನ್ ಮಾತ್ರ ಗಳಿಸಿದರು. ಆದರೂ ದಾಖಲೆ ನಿರ್ಮಿಸಿದರು. ಇದರೊಂದಿಗೆ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ರಿಕಿ ಪಾಂಟಿಂಗ್ ಮತ್ತು ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಿದ್ದಾರೆ. ಇದಕ್ಕೆ ಕಾರಣ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 13,000 ರನ್ ಗಳಿಸಿದ್ದಾರೆ.
ಪಂದ್ಯಗಳ ಲೆಕ್ಕದಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ 13,0000 ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಜೋ ರೂಟ್‌ಗೆ ಈ ಮೈಲಿಗಲ್ಲನ್ನು ತಲುಪಲು ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 28 ರನ್‌ಗಳ ಅಗತ್ಯವಿತ...
Click here to read full article from source
To read the full article or to get the complete feed from this publication, please
Contact Us.