ಭಾರತ, ಮಾರ್ಚ್ 8 -- ಭಾರತದ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೂ ಪಡೆಯುವ ಶುಲ್ಕ ಲಕ್ಷಗಳಲ್ಲಿ. ಐಪಿಎಲ್ ಒಪ್ಪಂದ, ಬಿಸಿಸಿಐ ವಾರ್ಷಿಕ ಒಪ್ಪಂದ ಪಡೆದರೆ ಸಿಗುವ ವೇತನ ಕೋಟಿಗಳಲ್ಲಿ. ಅಲ್ಲದೆ, ಭಾರತವನ್ನು ಪ್ರತಿನಿಧಿಸಿದ ಕ್ರಿಕೆಟಿಗರಿಗೆ ಪಿಂಚಣಿಯೂ ಸಿಗುತ್ತದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.

ಕೋಟಿ ಕೋಟಿ ನಿವ್ವಳ ಮೌಲ್ಯ ಹೊಂದಿರುವ ಮಾಜಿ ಕ್ರಿಕೆಟಿಗರಿಗೂ ಈ ಪಿಂಚಣಿ ದೊರೆಯುತ್ತಿದೆ. ಅಂತಹ ಕ್ರಿಕೆಟಿಗರಿಗೆ ಸಿಗುತ್ತಿರುವ ಈ ಪಿಂಚಣಿ ಏನೂ ಅಲ್ಲವಾದರೂ ಬಹುತೇಕರಿಗೆ ಜೀವನಕ್ಕೆ ದಾರಿದೀಪವಾಗಿದೆ ಎಂಬುದು ಕೂಡ ಅಷ್ಟೇ ಸತ್ಯ.

ಸಚಿನ್ ತೆಂಡೂಲ್ಕರ್ ಅವರ ಗೆಳೆಯ ವಿನೋದ್ ಕಾಂಬ್ಳಿ ಇತ್ತೀಚಿನ ಸ್ಥಿತಿಯ ಕುರಿತು ವಿಶೇಷವಾಗಿ ಹೇಳಬೇಕಿಲ್ಲ. ತಾನು ಬಿಸಿಸಿಐ ನೀಡುವ 30,000 ರೂ ಪಿಂಚಣಿಯಲ್ಲೇ ಜೀವನ ಸಾಗಿಸ್ತಿದ್ದಾರೆ. ಹೀಗಂತ ತಾನೇ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.

ವರದಿಗಳ ಪ್ರಕಾರ 1,481 ಕೋಟಿ ನಿವ್ವಳ ಮೌಲ್ಯ ಹೊಂದಿರುವ ಸಚಿನ್​ ತೆಂಡೂಲ್ಕರ್​ಗೂ ಪಿಂಚಣಿ ಬರುತ್ತಿದೆ. ಎಂಎಸ್ ಧೋನಿ, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್...