ಭಾರತ, ಮಾರ್ಚ್ 11 -- ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 10ರ ಸಂಚಿಕೆಯಲ್ಲಿ ಶ್ರಾವಣಿಗಾಗಿ ಆಟೊ ಓಡಿಸುತ್ತಿರುವ ಪದ್ಮನಾಭರ ಬಳಿ ಇರುವ ಹಣವೆಲ್ಲಾ ಕಳ್ಳತನವಾಗುತ್ತದೆ. ಇದರಿಂದ ಆಟೊ ಬಾಡಿಗೆ ಕೊಡಲು ದುಡ್ಡಿಲ್ಲದೇ, ಸೊಸೆ ಶ್ರಾವಣಿ ಉಂಗುರ ಬಿಡಿಸಿ ಕೊಡಲು ಆಗದೇ ಪದ್ಮನಾಭ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ನ್ಯಾಯವಾಗಿ ದುಡಿದ ದುಡ್ಡು ಎಲ್ಲಿಗೂ ಹೋಗುವುದಿಲ್ಲ ಎನ್ನುವ ಭರವಸೆಯಲ್ಲಿ ಮತ್ತೆ ಆಟೊ ಓಡಿಸಲು ಹೋಗುವ ಅವರ ಕಣ್ಣಿಗೆ ವಿಜಯಾಂಬಿಕಾ, ಸಿರಿಗೆರೆ, ಮದನ್‌ ಒಟ್ಟಿಗೆ ಒಂದೆಡೆ ಸೇರಿ ಏನೋ ಪ್ಲಾನ್ ಮಾಡುತ್ತಿರುವುದು ಕಾಣಿಸುತ್ತದೆ.

ವೀರು ಮೇಲೆ ಹೇಗಾದರೂ ಜನ ನಂಬಿಕೆ ಕಳೆದುಕೊಳ್ಳಬೇಕು ಎನ್ನುವ ಕಾರಣಕ್ಕೆ ವೀರು ತಲೆಗೆ ಕೊಲೆ ಅಪವಾದ ಕಟ್ಟುವ ಪ್ಲಾನ್ ಮಾಡುತ್ತಾರೆ ವಿಜಯಾಂಬಿಕಾ ಹಾಗೂ ಸಿರೆಗೆರೆ ಶ್ರೀನಿವಾಸ. ಮದನ್‌ ಪ್ಲಾನ್ ಬಗ್ಗೆ ಕೇಳಿದಾಗ ಸಿರೆಗೆರೆ 'ನಿಂಗೆ ಆ ಗಂಗಾಧರಯ್ಯ ಹೇಗೆ ಸತ್ತಿದ್ದು ಗೊತ್ತಾ' ಎಂದು ಕೇಳ್ತಾರೆ. ಅದಕ್ಕೆ ಮದನ್‌ 'ಅವರೇನೋ ಕಾಯಿಲೆ ಬಂದು ಸತ್ತಿದ್ದು ಅಲ್ವಾ?' ಎಂದು ಮರು ಪ್ರಶ್ನೆ ಮಾಡುತ್ತ...