ಭಾರತ, ಏಪ್ರಿಲ್ 22 -- ಭಾರತದಲ್ಲಿ ಹಲವರ ಬೆಳಿಗ್ಗೆ ಆರಂಭವಾಗುವುದು ಚಹಾ ಅಥವಾ ಕಾಫಿಯಿಂದ, ಅಂದರೆ ಪರೋಕ್ಷವಾಗಿ ಸಕ್ಕರೆಯಿಂದ ಎಂದು ಹೇಳಬಹುದು. ಇದರೊಂದಿಗೆ ಬೆಳಗಿನ ಉಪಾಹಾರದಲ್ಲೂ ಕೆಲವರು ಸಕ್ಕರೆ ಬಳಸುತ್ತಾರೆ. ಇನ್ನು ನಾವು ತಿನ್ನುವ ಅನ್ನ, ತರಕಾರಿ, ಹಣ್ಣುಗಳಲ್ಲೂ ನೈಸರ್ಗಿಕ ಸಕ್ಕರೆಯ ಅಂಶವಿರುತ್ತದೆ. ಇವೆಲ್ಲದರ ಜೊತೆಗೆ ಹೆಚ್ಚುವರಿಯಾಗಿ, ಸಂಸ್ಕರಿಸಿದ ಸಕ್ಕರೆಯ ಬಳಕೆಯು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಸಕ್ಕರೆ ತಿನ್ನುವುದರಿಂದ ನೀವು ಬೇಗನೆ ತೂಕ ಹೆಚ್ಚಬಹುದು. ಸಕ್ಕರೆ ಎಂದರೆ ಸಕ್ಕರೆಯನ್ನು ಬಾಯಿಗೆ ಹೇಳಿಕೊಂಡು ತಿನ್ನುವುದು ಎಂದರ್ಥವಲ್ಲ, ಸಕ್ಕರೆಯಿಂದ ಮಾಡಿದ ಯಾವುದೇ ಆಹಾರವನ್ನು ಸೇವಿಸಿದರೆ ಇದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಬಹುದು. ಇದರಿಂದ ದೇಹದಲ್ಲಿ ಇನ್ನಿಲ್ಲದ ಸಮಸ್ಯೆಗಳು ಎದುರಾಗುವುದು ಖಂಡಿತ.

ಸಕ್ಕರೆ ತಿಂದರೆ ಬೇಗ ತೂಕ ಹೆಚ್ಚುತ್ತದೆ. ಸಕ್ಕರೆಯಂಶ ಅತಿಯಾದರೆ ದೇಹದಲ್ಲಿ ಕ್ಯಾಲೊರಿ ಹೆಚ್ಚಲು ಕಾರಣವಾಗುತ್ತದೆ. ಇದು ಸಂಸ್ಕರಿಸಿ...