Bengaluru, ಫೆಬ್ರವರಿ 14 -- ಬೆಳಗ್ಗೆ ಎದ್ದ ಕೂಡಲೇ ಕುಡಿಯುವ ಚಹಾ ಕಾಫಿಗಳಿಂದ ಹಿಡಿದು, ಮಕ್ಕಳು ಇಷ್ಟಪಟ್ಟು ತಿನ್ನುವ ಚಾಕೊಲೇಟ್, ಹುಟ್ಟುಹಬ್ಬಗಳಲ್ಲಿ ಕಡ್ಡಾಯವಾಗಿ ಇರುವ ಕೇಕ್ ಗಳವರೆಗೆ ಸಕ್ಕರೆಯು ಬಹುತೇಕ ಜನರ ದಿನನಿತ್ಯದ ಆಹಾರಗಳಲ್ಲಿ ಕಡ್ಡಾಯ ಪದಾರ್ಥವಾಗಿ ಬಿಟ್ಟಿದೆ. ನಾಲಗೆಗೆ ಅದ್ಭುತ ರುಚಿ ಕೊಡುವ ಈ ಸಕ್ಕರೆ ಆರೋಗ್ಯದ ಮೇಲೆ ಎಷ್ಟು ದೊಡ್ಡ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತದೆ ಎನ್ನುವುದು ನಿಮಗೆ ಗೊತ್ತಾ? ತಜ್ಞರು ಇದರ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನು ಮುಂದಕ್ಕೆ ಓದಿ.

ಸಕ್ಕರೆ ನಿಮ್ಮ ಆರೋಗ್ಯದ ಮೇಲೆ ಯಾವುದೇ ಪ್ರಯೋಜನವಿಲ್ಲದ ಖಾಲಿ ಕ್ಯಾಲೋರಿಗಳೇ ಹೆಚ್ಚಾಗಿರುವ ಪದಾರ್ಥವಲ್ಲದೆ ಬೇರೇನೂ ಅಲ್ಲ ಎನ್ನುವುದು ಪೌಷ್ಟಿಕತಜ್ಞರೊಬ್ಬರ ಅಭಿಪ್ರಾಯ. ಇದರ ಅತಿಯಾದ ಸೇವನೆ ದೇಹದಲ್ಲಿ ಕೊಬ್ಬಿನ ಶೇಖರಣೆ ಕಾರಣವಾಗುತ್ತದೆ, ಅದರಲ್ಲೂ ಹೊಟ್ಟೆಯ ಸುತ್ತಲೂ ಕೊಬ್ಬನ್ನು ಹೆಚ್ಚಿಸುವಲ್ಲಿ ಸಕ್ಕರೆಯ ಪಾಲು ಹೆಚ್ಚು. ಇದು ಅತಿಯಾದ ತಿನ್ನುವ ಬಯಕೆ ಮತ್ತು ಹಸಿವನ್ನು ಹೆಚ್ಚಿಸುತ್ತದೆ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ...