ಭಾರತ, ಏಪ್ರಿಲ್ 9 -- ಮುಂಗಾರು ಮಳೆ ಸಿನಿಮಾದ ಮೂಲಕ ಕನ್ನಡಿಗರಿಗೆ ಹತ್ತಿರವಾದ ನಟಿ ಪೂಜಾಗಾಂಧಿ ಸದ್ಯ ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಅವರು ಕನ್ನಡಕ್ಕಾಗಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಹೊರ ರಾಜ್ಯದವರಾದರೂ ಕನ್ನಡಿಗರೂ ನಾಚುವಂತೆ ಕನ್ನಡ ಮಾತನಾಡುವ ಅವರನ್ನು ಕಂಡರೆ ಕರುನಾಡ ಮಂದಿಗೆ ವಿಶೇಷ ಪ್ರೀತಿ. ಆಗೊಮ್ಮೆ ಈಗೊಮ್ಮೆ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸುವ ಪೂಜಾಗಾಂಧಿ ಇದೀಗ ಜಪಾನ್‌ನಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಜಪಾನ್‌ನಲ್ಲಿ ಈಗ ಸಕೂರ ಹೂ ಅರಳುವ ಸಮಯ. ತಿಳಿ ಗುಲಾಬಿ ಬಣ್ಣದ ಈ ಹೂಗಳನ್ನು ನೋಡೋದೇ ಕಣ್ಣಿಗೆ ಹಬ್ಬ. ಈ ಹೂಗಳನ್ನು ನೋಡುವ ಸಲುವಾಗಿ ಸಾಕಷ್ಟು ಜನ ಜಪಾನ್‌ಗೆ ಪ್ರವಾಸಕ್ಕೆ ತೆರಳುತ್ತಾರೆ. ಇದೀಗ ಪೂಜಾ ಗಾಂಧಿ ಕೂಡ ಜಪಾನ್‌ಗೆ ತೆರಳಿದ್ದು, ಕನ್ನಡ ವ್ಲಾಗರ್ ಶ್ವೇತಾ ಪೂಜಾಗಾಂಧಿ ಜೊತೆ ಇರುವ ವಿಡಿಯೊ ಹಂಚಿಕೊಂಡಿದ್ದಾರೆ. ಶ್ವೇತಾ ಕನ್ನಡತಿ ಇನ್ ಜಪಾನ್ ಎನ್ನುವ ಹೆಸರಿನಲ್ಲಿ ಜಪಾನ್‌ನಿಂದ ವ್ಲಾಗ್ ಮಾಡುತ್ತಾರೆ ಶ್ವೇತಾ.

ಶ್ವೇತಾ ಜೊತೆ ವಿಡಿಯೊದಲ್ಲಿ ಕಾಣಿಸಿರುವ ಪೂಜಾಗಾಂಧಿ 'ಹೆಲೋ, ಹಾ...