ಭಾರತ, ಫೆಬ್ರವರಿ 13 -- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 13ರಂದು ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ-2025 ಮಂಡಿಸಿದರು. ಬಹು ನಿರೀಕ್ಷಿತ ಹೊಸ ಮಸೂದೆಯಲ್ಲಿ ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾದ ಪರಿಭಾಷೆಯನ್ನು ಬಳಸಲಾಗಿದೆ. ಈ ಮಸೂದೆಯು 622 ಪುಟಗಳಷ್ಟಿದ್ದು, 536 ವಿಭಾಗಗಳು, 23 ಅಧ್ಯಾಯಗಳು ಹಾಗೂ 16 ಶೆಡ್ಯೂಲ್‌ಗಳನ್ನು ಒಳಗೊಂಡಿದೆ. ಇದರಲ್ಲಿ ಹೊಸ ತೆರಿಗೆಗಳನ್ನು ಪರಿಚಯಿಸುವುದಿಲ್ಲ. ಆದರೆ ಈಗ ಅಸ್ತಿತ್ವದಲ್ಲಿರುವ 1961ರ ಆದಾಯ ತೆರಿಗೆ ಕಾಯ್ದೆಯ ಭಾಷೆಯನ್ನು ಸರಳಗೊಳಿಸಲಾಗುತ್ತದೆ.
ಹೊಸ ಆದಾಯ ತೆರಿಗೆ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಈ ಕುರಿತು ನೀವು ತಿಳಿಯಬೇಕಾದ ಪ್ರಮುಖ 10 ಅಂಶಗಳಿವು.
1. ಮಸೂದೆಯ ಸರಳ ಭಾಷೆಯು ಟ್ಯಾಕ್ಸ್ ಲಿಟಿಗೇಷನ್ (ತೆರಿಗೆದಾರರು ಮತ್ತು ತೆರಿಗೆ ಅಧಿಕಾರಿಗಳ ನಡುವಿನ ತೆರಿಗೆ ಮೌಲ್ಯಮಾಪನ, ಸಂಗ್ರಹಣೆ ಮತ್ತು ಜಾರಿಗೊಳಿಸುವಿಕೆಗೆ ಸಂಬಂಧಿಸಿದ ವಿವಾದಗಳನ್ನು ಪರಿಹರಿಸುವ ಕಾನೂನು ಪ್ರಕ್ರಿಯೆ) ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ತೆರಿ...
Click here to read full article from source
To read the full article or to get the complete feed from this publication, please
Contact Us.