ಭಾರತ, ಮಾರ್ಚ್ 8 -- ಬೆಂಗಳೂರು: ಮಹಾನಗರಿ ಬೆಂಗಳೂರು ಒಂದಲ್ಲ ಒಂದು ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಮೂಲವಾಗುತ್ತಿರುತ್ತದೆ. ಇದೀಗ ಬೆಂಗಳೂರಿನ ಬಾಡಿಗೆ ಮನೆ ವಿಚಾರ ಚರ್ಚೆಗೆ ಹಾಟ್‌ಟಾಪಿಕ್‌ ಆಗಿದೆ. ಸಾಮಾಜಿಕ ಜಾಲತಾಣ ವೇದಿಕೆಯಾದ ಗ್ರೇಪ್ ವೈನ್‌ನಲ್ಲಿ ಮನೆ ಬಾಡಿಗೆ ವಿಚಾರವಾಗಿ ಪೋಸ್ಟ್‌ವೊಂದು ಪ್ರಕಟವಾಗಿದೆ.

ಆ ಪೋಸ್ಟ್‌ನಲ್ಲಿ ಬೆಂಗಳೂರಲ್ಲಿ ಸಂಬಳಕ್ಕಿಂತ ಮನೆ ಬಾಡಿಗೆಯೇ ವೇಗವಾಗಿ ಬೆಳೆಯುತ್ತಿದೆ ಎಂದು ಬರೆಯಲಾಗಿದೆ. ಇದಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದು ಈ ವಿಚಾರ ಸಮರ್ಥನೀಯವಲ್ಲ ಎಂದಿದ್ದಾರೆ. ಅಲ್ಲದೇ ಬಾಡಿಗೆ ದರ ದಿನೇ ದಿನೇ ಏರಿಕೆಯಾಗುತ್ತಿರುವ ಬಗ್ಗೆ ಜನರು ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ಮಹಾನಗರಿಯಲ್ಲಿ ತಾವು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳ ಬಗ್ಗೆಯೂ ಮಾತನಾಡಿದ್ದಾರೆ.

'ಸಂಬಳ ಹೆಚ್ಚುವುದಕ್ಕಿಂತ ವೇಗವಾಗಿ ಬಾಡಿಗೆ ಹೆಚ್ಚುತ್ತಿದೆ' ಎಂದು ಬರೆದಿರುವ ಈ ಪೋಸ್ಟ್ ಬೆಂಗಳೂರು ಜೀವನದ ಕಟು ವಾಸ್ತವವನ್ನು ಎತ್ತಿ ತೋರಿಸಿದೆ. 'ಸದ್ಯ ಟಾಪ್ ಏರಿಯಾಗಳಲ್ಲಿ 3 ಬೆಡ್‌ರೂಮ್‌ ಮನೆಗೆ 90 ಸಾವ...