ಭಾರತ, ಮಾರ್ಚ್ 17 -- ನರಕಾಸುರನ ಸೇನಾಧಿಪತಿಯ ಹೆಸರು ಹಯಗ್ರೀವಾಸುರ. ಇವನು ಒಂದು ವರವನ್ನು ಪಡೆದಿರುತ್ತಾನೆ. ಅದರಂತೆ ಇವನ ಹೆಸರಿರುವ ವ್ಯಕ್ತಿಯಿಂದ ಮರಣ ಉಂಟಾಗುತ್ತದೆ. ಈ ಕಾರಣದಿಂದಲೇ ವಿಷ್ಣುವು ಹಯಗ್ರೀವನ ಅವತಾರದಲ್ಲಿ ಅಸುರನ ಸಂಹಾರ ಮಾಡುತ್ತಾನೆ. ಹಯಗ್ರೀವನು ವಿದ್ಯಾದೈವವೂ ಹೌದು. ಹಯಗ್ರೀವರಿಂದ ಅಗಸ್ತ್ಯ ಮಹಾಮುನಿಗಳಿಗೆ ಲಲಿತಾಸಹಸ್ರನಾಮದ ಬೋಧನೆ ಆಗುತ್ತದೆ. ಇದೇ ರೀತಿ ವಾದಿರಾಜಸ್ವಾಮಿಗಳಿಗೆ ಸಹ ಹಯಗ್ರೀವರು ಸಂದರ್ಶನ ನೀಡುತ್ತಾರೆ.

ನಮಗೆ ದೊರೆಯುವ ಧಾರ್ಮಿಕತೆಗೆ ಸಂಬಂಧಿಸಿದಂತೆ ಮತ್ತೊಂದು ಕತೆಯಿದೆ. ಅದರ ಪ್ರಕಾರ ನರಕಾಸುರನು ಬ್ರಹ್ಮದೇವನ ಬಳಿ ಇದ್ದ ವೇದಗಳನ್ನು ಕಳ್ಳತನ ಮಾಡುತ್ತಾನೆ. ಯಾರೊಬ್ಬರ ಕೈಗೂ ಸಿಲುಕದೆ ಓಡಿಹೋಗುತ್ತಾನೆ. ಅವನನ್ನು ಬಂಧಿಸಲು ವಿಫಲನಾದ ಬ್ರಹ್ಮದೇವನು ಶಿವನ ಸಹಾಯವನ್ನು ಬೇಡುತ್ತಾನೆ. ಆದರೂ ವೇದಗಳನ್ನು ಮರಳಿ ಪಡೆಯಲು ಸಾಧ್ಯವಾಗುವುದಿಲ್ಲ. ಆಗ ದೇವತೆಗಳೆಲ್ಲರೂ ವಿಷ್ಣುವಿನ ಮೊರೆ ಹೋಗುತ್ತಾರೆ. ಆಗ ವಿಷ್ಣುವು ಹಯಗ್ರೀವನ ಅವತಾರ ತಾಳುತ್ತಾನೆ. ಯುದ್ಧ ಮಾಡಿ ನರಕಾಸುರನಿಂದ ವೇದಗಳನ್ನು ಪ...