Bengaluru, ಜನವರಿ 31 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯ ಗುರುವಾರ (ಜನವರಿ 30)ದ ಸಂಚಿಕೆಯಲ್ಲಿ ಸಿದ್ದೇಗೌಡ ಮತ್ತು ಜವರೇಗೌಡರ ನಡುವೆ ಮತ್ತೆ ಮಾತು ಮುಂದುವರಿದಿದೆ. ಭಾವನಾ ಬಳಿ ಸತ್ಯ ಹೇಳಿಕೊಳ್ಳುತ್ತೇನೆ ಎಂದ ಸಿದ್ದೇಗೌಡನನ್ನು ಜವರೇಗೌಡ್ರು ಮಾತಿನಲ್ಲೇ ಮಣಿಸಿದ್ದಾರೆ. ನೀನು ಈಗ ಹೋಗಿ ಎಲ್ಲ ಸತ್ಯವನ್ನು ಹೇಳಿದರೆ ಆಕೆ ನಿನ್ನನ್ನು ಕ್ಷಮಿಸುವಳೇ? ಅದು ಹೇಗೆ ಸಾಧ್ಯ? ನಿನ್ನ ಮೇಲಿನ ನಂಬಿಕೆ, ಪ್ರೀತಿ ಆಕೆಗೆ ಕಡಿಮೆಯಾಗಬಹುದು. ಹೀಗಾಗಿ ನಿನ್ನನ್ನು ಆಕೆ ಬಿಟ್ಟು ಹೋಗಬಹುದು ಎಂದು ಜವರೇಗೌಡ್ರು ಸಿದ್ದೇಗೌಡನ ಕಿವಿಹಿಂಡುತ್ತಾರೆ. ಅಲ್ಲದೇ, ನನ್ನ ರಾಜಕೀಯ ಭವಿಷ್ಯ ನಿನ್ನ ಮಾತಿನ ಮೇಲೆ ನಿಂತಿದೆ ಎಂದು ಮನವೊಲಿಸುತ್ತಾರೆ. ಆಗ ಸಿದ್ದೇಗೌಡ ಹೌದು, ನಾನು ಈಗ ಸತ್ಯ ಹೇಳಿದರೆ, ಮೇಡಂ ನನ್ನನ್ನು ಬಿಟ್ಟು ಹೋಗಬಹುದು, ನನ್ನ ಮೇಲಿನ ಪ್ರೀತಿ ನಂಬಿಕೆ ಕಡಿಮೆಯಾಗಬಹುದು ಎಂದು ಸುಮ್ಮನಾಗುತ್ತಾನೆ. ಹೀಗಾಗಿ ಜವರೇಗೌಡ್ರು ನಿಟ್ಟುಸಿರು ಬಿಡುತ್ತಾರೆ.

ಮನೆಯಲ್ಲಿರುವ ರೂಮ್ ಫ್ರೆಶ್ನರ್‌ನಲ್ಲಿ ಅಳವಡಿಸಿರುವ ಸಿಸಿಟಿ...