ಭಾರತ, ಫೆಬ್ರವರಿ 16 -- ಜನ್ಮ ಕುಂಡಲಿಯಲ್ಲಿ ಸರ್ಪದೋಷವಿದ್ದಲ್ಲಿ ಸಂತಾನಪ್ರಾಪ್ತಿಗೆ ತೊಂದರೆಗಳು ಎದುರಾಗಬಹುದು. ಆದರೆ ಇದರಿಂದ ಪರಿಹಾರ ಪಡೆಯಲು ಸಾಕಷ್ಟು ಮಂದಿ ಭಕ್ತರು ಕೇರಳದಲ್ಲಿನ ಹರಿಪಾದ್ ಎಂಬ ಸ್ಥಳದಲ್ಲಿ ಇರುವ ನಾಗರಾಜನ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ದೇಗುಲವು ಮನ್ನಾರಾಸಲ ನಾಗರಾಜ ದೇವಸ್ಥಾನವೆಂದು ಪ್ರಸಿದ್ಧಿಯಾಗಿದೆ. ಇದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯಾತ್ರಾಸ್ಥಳವಾಗಿದೆ. ಸಂತಾನ ದೋಷ ಇರುವವರಿಗೆ ಅರಿಶಿಣದಿಂದ ತಯಾರಿಸಿದ ಪೇಸ್ಟನ್ನು ಪ್ರಸಾದವನ್ನಾಗಿ ನೀಡಲಾಗುತ್ತದೆ. ಇದರಿಂದ ಸಂತಾನ ದೋಷ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ, ನಿರೀಕ್ಷಿತ ಫಲವನ್ನು ಪಡೆದ ದಂಪತಿ ತಮ್ಮ ಹರಕೆಯನ್ನು ತೀರಿಸಲು ಸತತವಾಗಿ ಈ ದೇವಾಲಕ್ಕೆ ಭೇಟಿನೀಡುತ್ತಾರೆ. ಭಾರತದ ವಿಶಾಲವಾದ ದೇವಾಲಯದಲ್ಲಿ ಇದು ಒಂದಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ ಈ ದೇಶವು ಪರಶುರಾಮ ನಿರ್ಮಿಸಿದ ದೇವಾಲಯವಾಗಿದೆ.

ತನ್ನ ಪ್ರತಿಜ್ಞೆಯಂತೆ ಪರಶುರಾಮನು ಅಸಂಖ್ಯಾತ ಕ್ಷತ್ರಿಯರನ್ನು ಕೊಲ್ಲುತ್ತಾನೆ. ಆದರ ಪಾಪದಿಂದ ಬಿಡುಗಡೆ ಹೊಂ...