Bengaluru, ಏಪ್ರಿಲ್ 2 -- ಆಕಸ್ಮಿಕ ಗರ್ಭಧಾರಣೆ ತಡೆಗಟ್ಟಲು ಮಹಿಳೆಯರು ಮೌಖಿಕ ಗರ್ಭನಿರೋಧಕ (OCP) ಅಥವಾ ಜನನ ನಿಯಂತ್ರಣ ಮಾತ್ರೆಗಳ ಮೊರೆ ಹೋಗುವುದು ಸಾಮಾನ್ಯ. ಆದರೆ ಈ ಮಾತ್ರೆಗಳಿಂದ ಮಾನಸಿಕ ಅಸ್ವಸ್ಥತೆ ಮತ್ತು ಖಿನ್ನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು. ಸುಲಭವಾಗಿ ಗರ್ಭಧಾರಣೆ ತಡೆಗಟ್ಟುವುದಾದರೂ, ಹಾರ್ಮೋನ್‌ಗಳ ನಿಯಂತ್ರಣದಿಂದ ಮುಟ್ಟಿನ ಚಕ್ರವು ಏರುಪೇರಾಗುತ್ತದೆ. ಇದರಿಂದ ಆರೋಗ್ಯದ ಮೇಲೆ ಬೀರುವ ಪರಿಣಾಮ ಹೇಗಿರುತ್ತದೆ ಎಂಬುದನ್ನು ಫ್ರಾಂಟಿಯರ್ಸ್ ಇನ್ ಸೈಕಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ತಿಳಿಸಿದೆ.

ಗರ್ಭನಿರೋಧಕ ಮಾತ್ರೆಗಳು, ಅಂಡಾಶಯದಿಂದ ಮೊಟ್ಟೆ ಬಿಡುಗಡೆಯಾಗದಂತೆ ತಡೆಗಟ್ಟುವ ಹಾರ್ಮೋನುಗಳನ್ನು ಹೇಗೆ ಒಳಗೊಂಡಿರುತ್ತದೆ ಎಂಬುದನ್ನು ಈ ಅಧ್ಯಯನವು ವಿವರಿಸಿದೆ. ಇದರಿಂದ ಮುಟ್ಟಿನ ಸೆಳೆತ ಮತ್ತು ಮೊಡವೆ ಕಡಿಮೆ ಮಾಡುವಂತಹ ಪ್ರಯೋಜನ ಹೊಂದಿದೆ ಎಂದು ವಿವರಿಸಿದೆ. ಆದರೆ, ಈ ಮಾತ್ರೆಗಳು ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರುವುದರಿಂದ ಅನಾರೋಗ್ಯ ಸೇರಿದಂತೆ ದೈಹಿಕ ಮತ್ತು ಮಾನಸಿಕ ಅಸ್ವಸ್ಥತೆಗಳು/ಅನಾನುಕೂ...