ಭಾರತ, ಜೂನ್ 16 -- ಬಾಲ್ಯದ ಆರೋಗ್ಯ ಸಮಸ್ಯೆಗಳನ್ನು ಸಾಮಾನ್ಯವಾಗಿ ಎಲ್ಲರೂ ತಾತ್ಕಾಲಿಕ ಸಮಸ್ಯೆ ಎಂದೇ ಪರಿಗಣಿಸುತ್ತಾರೆ. ಆ ಸಮಸ್ಯೆಗಳಿಂದ ಮಕ್ಕಳು ಕಾಲಾನಂತರದಲ್ಲಿ ಗುಣಮುಖರಾಗುತ್ತಾರೆ ಎಂಬ ವಿಶ್ವಾಸ ಇರುತ್ತದೆ. ಆದರೆ ಎಲ್ಲಾ ಸಮಸ್ಯೆಗಳನ್ನೂ ಮೀರಲು ಸಾಧ್ಯವಿಲ್ಲ. ಬಾಲ್ಯದಲ್ಲಿ ಅನುಭವಿಸಿದ ಕೆಲವು ವೈದ್ಯಕೀಯ ಸಮಸ್ಯೆಗಳು ಮುಂದೊಂದು ದಿನ ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರಭಾವ ಬೀರಬಹುದಾಗಿದೆ. ದುರಾದೃಷ್ಟಕರ ವಿಚಾರವೆಂದರೆ ವಯಸ್ಕರಾದಾಗ ಬಂಜೆತನಕ್ಕೂ ಕಾರಣವಾಗಬಹುದು. ಭಾರತದಲ್ಲಿ ಸಂತಾನೋತ್ಪತ್ತಿ ಆರೋಗ್ಯದ ಕುರಿತು ಈ ಜಾಗೃತಿ ಹೆಚ್ಚುತ್ತಿದೆ. ಇಂಥ ಸಂದರ್ಭದಲ್ಲಿ ಮುಂದೊಂದು ದಿನ ಸಮಸ್ಯೆ ತಂದೊಡ್ಡಬಹುದಾದ ಬಾಲ್ಯದ ಆರೋಗ್ಯ ಸಮಸ್ಯೆಗಳ ಕುರಿತು ಗಮನಿಸಬೇಕಾಗಿದೆ ಮತ್ತು ಅದನ್ನು ಪರಿಹರಿಸಬೇಕಾಗಿದೆ ಕೂಡ.

ಹಲವಾರು ಬಾಲ್ಯದ ಆರೋಗ್ಯ ಸಮಸ್ಯೆಗಳು ಸಂತಾನೋತ್ಪತ್ತಿ ವ್ಯವಸ್ಥೆಯ ಮೇಲೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಪರಿಣಾಮ ಬೀರಬಹುದು. ಅಂತಹ ಒಂದು ಆರೋಗ್ಯ ಸಮಸ್ಯೆ ಎಂದರೆ ಮಂಪ್ಸ್ ಎಂದು ಕರೆಯಲ್ಪಡುವ ಗದ್ದಕಟ್ಟು ರೋಗ...