Bangalore, ಮೇ 23 -- ಪ್ರೇಕ್ಷಕರು ಸಂಜು ವೆಡ್ಸ್ ಗೀತಾ-2 ಚಿತ್ರದ ಕಂಟೆಂಟ್, ಸಾಂಗ್ಸ್, ಅದ್ದೂರಿ ಮೇಕಿಂಗ್ ಎಲ್ಲವನ್ನೂ ತುಂಬಾ ಇಷ್ಟ ಪಟ್ಟಿದ್ದರು. ಚಿತ್ರದ ನಿರೂಪಣೆ, ಕ್ಯಾಮೆರಾ ವರ್ಕ್ ಎಲ್ಲಾ ಅದ್ಭುತವಾಗಿದ್ದರೂ, ಎಲ್ಲೋ ಒಂದು ಕಡೆ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂಬ ಅಭಿಪ್ರಾಯ ಕೆಲವರಿಂದ ಕೇಳಿಬಂದಿತ್ತು.
ಬಿಡುಗಡೆ ಸಂದರ್ಭದಲ್ಲಿ ಒಂದಷ್ಟು ಆತಂಕ ಸೃಷ್ಟಿಯಾಗಿದ್ದ ಕಾರಣ ಎಲ್ಲವನ್ನೂ ಗಮನಿಸಲು ಚಿತ್ರತಂಡಕ್ಕೂ ಸಾಧ್ಯವಾಗಿಲ್ಲ. ಹಾಗಾಗಿ ಮೂರೇ ದಿನದಲ್ಲಿ ಚಿತ್ರದ ಪ್ರದರ್ಶನವನ್ನು ಎಲ್ಲಾ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಹೊಸದಾಗಿ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಚಿತ್ರಕ್ಕೆ ಮರು ಜೋಡಿಸಲಾಗಿದ್ದು, ಇದೀಗ ಜೂನ್ 6ರಂದು ಹೊಸ ವರ್ಷನ್ ರಿಲೀಸ್ ಮಾಡುವ ಸಿದ್ದತೆ ನಡೆದಿದೆ.
ಫಿಲಂ ಚೇಂಬರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. "ಯಾವುದೇ ಚಿತ್ರತಂಡ ನಮ್ಮ ಬಳಿ ಬಂದಾಗ ಚೇಂಬರ್ ಸಂಪೂರ್ಣ ಸಹಕಾರ ನೀಡುತ್ತ ಬಂದಿದೆ. ಸಂಜು ವೆಡ್ಸ್ ಗೀತಾ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.