ಭಾರತ, ಏಪ್ರಿಲ್ 23 -- 18ನೇ ಆವೃತ್ತಿಯ ಐಪಿಎಲ್​ 2025ರ ಮೊದಲ ಹಂತದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಆಡಿದಾಗ, ಕೆಎಲ್ ರಾಹುಲ್ ತಂಡದ ಭಾಗವಾಗಿರಲಿಲ್ಲ. ಆ ಪಂದ್ಯ ವಿಶಾಖಪಟ್ಟಣದಲ್ಲಿ ನಡೆದಿತ್ತು. ತಂದೆಯಾದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ರಾಹುಲ್, ಇದೀಗ ಲಕ್ನೋದಲ್ಲಿ ನಡೆದ ಅದೇ ತಂಡದ ವಿರುದ್ಧ ಮತ್ತು ತನ್ನ ಮಾಜಿ ತಂಡದ ಎದುರು ಕಣಕ್ಕಿಳಿದ ಕೆಎಲ್, ಅಬ್ಬರಿಸಿ ಬೊಬ್ಬಿರಿದರು. ತನಗೆ ಮಾಡಿದ್ದ ಅವಮಾನಕ್ಕೆ ಉತ್ತರವಾಗಿ ಎಲ್​ಎಸ್​ಜಿ ವಿರುದ್ಧ ಸೊಗಸಾದ ಫಿಫ್ಟಿ ಬಾರಿಸಿ ಡೆಲ್ಲಿಗೆ ಭರ್ಜರಿ ಗೆಲುವು ತಂದುಕೊಟ್ಟರು. ಪಂದ್ಯ ಗೆದ್ದ ಬೆನ್ನಲ್ಲೇ ಎಸ್ಎಲ್​ಜಿ ಮಾಲೀಕ ಸಂಜೀವ್ ಗೋಯೆಂಕಾ ಕನ್ನಡಿಗನನ್ನು ಯತ್ನಿಸದರೂ ರಾಹುಲ್ ಕ್ಯಾರೆ ಎನ್ನದೆ ಅಲ್ಲಿಂದ ಹೊರಟು ಹೋದ ದೃಶ್ಯ ವೈರಲ್ ಆಗುತ್ತಿದೆ.

ರಿಷಭ್ ಪಂತ್ ನೇತೃತ್ವದ ಲಕ್ನೋ ತಂಡವು ಇದೇ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧ ಆಡಿದ ಎರಡೂ ಪಂದ್ಯಗಳನ್ನು ಸೋತಿದೆ. ಪಂತ್ ಪಡೆಯ ವಿರುದ್ಧ ಅಕ್ಷರ್​ ಪಡೆ 8 ವಿಕೆಟ್​ಗಳಿಂದ ಗೆದ್ದ ಬೆನ್ನಲ್ಲೇ ಸಾಂಪ್ರ...