ಭಾರತ, ಮೇ 25 -- ಬಿಹಾರ ರಾಜಕೀಯದ ಮಹತ್ವದ ಬೆಳೆವಣಿಗೆಯೊಂದರಲ್ಲಿ, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮ ದೊಡ್ಡ ಮಗ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಸಂಗಾತಿ ಜತೆಗೆ ಇರುವ ತೇಜ್ ಪ್ರತಾಪ್ ಅವರ ಫೋಟೋ ವೈರಲ್ ಆಗಿರುವುದೇ ಇದಕ್ಕೆ ಕಾರಣ. ಹೀಗಾಗಿ, ಲಾಲು ಪ್ರಸಾದ್ ಅವರು ಪುತ್ರ ತೇಜ್ ಪ್ರತಾಪ್ ಅವರನ್ನು ಪಕ್ಷದಿಂದಷ್ಟೇ ಅಲ್ಲ, ತಮ್ಮ ಕುಟುಂಬದಿಂದಲೂ ಹೊರ ಹಾಕಿದ್ದಾರೆ. ಈ ವಿಚಾರವನ್ನು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಇನ್ನು ಮುಂದೆ ತೇಜ್ ಪ್ರತಾಪ್ ಮತ್ತು ತಮ್ಮ ಕುಟುಂಬ ಅಥವಾ ಪಕ್ಷಕ್ಕೆ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ವೈಯಕ್ತಿಕ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವಂತಹ ನಡೆಯು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟವನ್ನು ದುರ್ಬಲಗೊಳಿಸುತ್ತದೆ. ಹಿರಿಯ ಮಗನ ಚಟುವಟಿಕೆ, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆಗಳು ನಮ್ಮ ಕುಟುಂಬದ ಮೌಲ್ಯಗಳು ಮತ್ತು ಆಚರಣೆಗಳ...
Click here to read full article from source
इस लेख के रीप्रिंट को खरीदने या इस प्रकाशन का पूरा फ़ीड प्राप्त करने के लिए, कृपया
हमे संपर्क करें.