ಭಾರತ, ಫೆಬ್ರವರಿ 9 -- ಭಾರತದ ಪಶ್ಚಿಮ ಕರಾವಳಿಯಲ್ಲಿರುವ ಗೋವಾ ಒಂದು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕಡಲತೀರಗಳು, ಐತಿಹಾಸಿಕ ದೇವಾಲಯಗಳು, ಚರ್ಚ್‌ಗಳು ಮತ್ತು ಸುಂದರವಾದ ಸ್ಥಳಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಪಾಕಪದ್ಧತಿ, ವಾಸ್ತುಶಿಲ್ಪ, ಪೋರ್ಚುಗೀಸ್ ಪ್ರಭಾವದಿಂದ ಬದಲಾದ ಜೀವನಶೈಲಿ ಇತ್ಯಾದಿಯನ್ನು ಅನುಭವಿಸುವುದೇ ಒಂದು ಆನಂದ. ಗೋವಾವು ವಿಶ್ರಾಂತಿ ಮತ್ತು ಸಾಹಸ ಎರಡಕ್ಕೂ ನೆಚ್ಚಿನ ತಾಣವಾಗಿದೆ. ಅದರಲ್ಲೂ ಗೋವಾದ ರಾತ್ರಿ ಜೀವನ ಜಗತ್ತನ್ನೇ ಆಕರ್ಷಿಸಿದೆ. ನೀವು ಸಂಗಾತಿ ಜೊತೆಗೆ ಭೇಟಿ ನೀಡಲು ಯೋಜಿಸಿದ್ದರೆ, ಈ 5 ಆಕರ್ಷಕ ತಾಣಗಳಿಗೆ ಭೇಟಿ ನೀಡಲೇಬೇಕು.

ಮಹಲ್ಸಾ ದೇವಿ ದೇವಾಲಯ: ಗೋವಾದಲ್ಲಿ ಚರ್ಚುಗಳು ಮತ್ತು ಕಡಲತೀರಗಳು ಮಾತ್ರವಲ್ಲ, ಪ್ರಾಚೀನ ದೇವಾಲಯಗಳಿಗೂ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಅಂತಹ ಐತಿಹಾಸಿಕ ದೇವಾಲಯವೆಂದರೆ ಗೋವಾದ ಮರ್ಡೋಲ್‌ನಾ ಫೋಂಡಾದಲ್ಲಿರುವ ಮಲ್ಸಾ ದೇವಿ ದೇವಸ್ಥಾನ. ಈ ಪ್ರಾಚೀನ ದೇವಾಲಯವು ವಿಷ್ಣುವಿನ ಸ್ತೀ ಅವತಾರವಾದ ಮಲ್ಸಾ ದೇವಿಗೆ ಅಪ್ರಿತವಾಗಿದ್ದು, ಹಿಂದೂಗಳಿಗೆ ಇದು ಬಹಳ ಪವಿತ್ರ...