Bengaluru, ಮೇ 14 -- ಸಂಕಷ್ಟಹರ ಎಂದರೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಕೊನೆ ಮಾಡುವುದು ಎಂಬ ಅರ್ಥ ಬರುತ್ತದೆ. ಆದರೆ ಚತುರ್ಥಿ ತಿಥಿಯು ಬರುವ ವಾರ ಅಥವಾ ದಿನ ಮತ್ತು ಆಂದಿನ ನಕ್ಷತ್ರವನ್ನು ತಿಳಿಯುಬೇಕು. 2025 ರ ಮೇ 16ರ ಶುಕ್ರವಾರ ಸಂಕಷ್ಟಹರ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ಪೂಜೆಯನ್ನು ಸೂರ್ಯಾಸ್ತದ ನಂತರ ಆರಂಭಿಸಬೇಕು. ಚಂದ್ರೋದಯ ನಂತರ ಚಂದ್ರನಿಗೆ ಅರ್ಘ್ಯ ನೀಡುವ ಮೂಲಕ ಪೂಜೆಯನ್ನು ಪರಿಸಮಾಪ್ತಿ ಮಾಡಲಾಗುತ್ತದೆ.

ಈ ದಿನದ ವಿಶೇಷತೆ ಎಂದರೆ ಚೌತಿಯು ರಾತ್ರಿ 2.05 ರ ವರೆಗೂ ಇರುತ್ತದೆ. ಮೂಲ ನಕ್ಷತ್ರವು ಮಧ್ಯಾಹ್ನ 1.50 ರವರೆಗೆ ಇರುತ್ತದೆ. ಆನಂತರ ಪೂರ್ವಾಷಾಢ ನಕ್ಷತ್ರವು ಆರಂಭವಾಗುತ್ತದೆ. ಅಂದರೆ ಪೂಜೆಯನ್ನು ಮಾಡುವ ವೇಳೆ ಪೂರ್ವಾಷಾಢ ನಕ್ಷತ್ರ ಇರುತ್ತದೆ. ಪೂರ್ವಾಷಾಢ ನಕ್ಷತ್ರವು ಶುಕ್ರನ ನಕ್ಷತ್ರವಾಗುತ್ತದೆ. ಶುಕ್ರವಾರ ಅಥವಾ ಬುಧವಾರ ಈ ನಕ್ಷತ್ರಗಳು ಬಂದ ವೇಳೆ ಮಾಡುವ ಪೂಜೆ ಪುನಸ್ಕಾರಗಳಿಂದ ಮತ್ತು ದಾನ ಧರ್ಮಗಳಿಂದ ವಿಶೇಷವಾದ ಫಲಗಳು ದೊರೆಯುತ್ತವೆ.

ಬೆಳಗಿನ ವೇಳೆ ಶ್ರೀ ಮಹಾಲಕ್ಷ್ಮಿಯ ಪೂಜೆಯ...