ಭಾರತ, ಫೆಬ್ರವರಿ 18 -- ಒಟಿಟಿ ಆಗಮನದ ನಂತರದಲ್ಲಿ ದೂರದರ್ಶನ ನೋಡುಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಒಟಿಟಿ ಪ್ಲಾಟ್‌ಫಾರ್ಮ್‌ಗಳು ಮಾರುಕಟ್ಟೆಗೆ ಬಂದ ನಂತರ ಟಿವಿ ಪ್ರಸಾರ ಉದ್ಯಮವು ಸಂಕಷ್ಟದಲ್ಲಿದೆ. ಅದರ ಮೇಲಿನಿಂದ ಇನ್ನೊಂದು ಸಮಸ್ಯೆ ಈಗ ಟಿವಿ ವಾಹಿನಿಗಳಿಗೆ ಎದುರಾಗುತ್ತಿದೆ. ಏಪ್ರಿಲ್ 1, 2025 ರಿಂದ ಸೋನಿ, ಝೀ ಮತ್ತು ಸ್ಟಾರ್‌ನಂತಹ ನೆಟ್‌ವರ್ಕ್‌ ವಾಹಿನಿಗಳು ಸೇರಿದಂತೆ ನೂರಕ್ಕೂ ಹೆಚ್ಚು ವಾಹಿನಿಗಳು ತಮ್ಮ ಪ್ರಸಾರ ನಿಲ್ಲಿಸಬೇಕಾದ ಪರಿಸ್ಥಿತಿ ಉದ್ಭವಿಸುವಂತೆ ಕಾಣಿಸುತ್ತಿದೆ ಎಂಬ ವರದಿಗಳು ಪ್ರಕಟವಾಗಿದೆ. 'ಎಕನಾಮಿಕ್ ಟೈಮ್ಸ್' ಸೇರಿದಂತೆ ಹಲವು ಜಾಲತಾಣಗಳಲ್ಲಿ ಪ್ರಕಟವಾಗಿರುವ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಉಪಗ್ರಹಗಳು ಬಾಹ್ಯಾಕಾಶ ಆಧಾರಿತ ಸಂವಹನ ಅಥವಾ ಪ್ರಸಾರ ಸೇವೆಗಳನ್ನು ಒದಗಿಸಲು IN-SPACE (Indian National Space Promotion and Authorization Centre, ಭಾರತೀಯ ಬಾಹ್ಯಾಕಾಶ ಪ್ರಚಾರ ಮತ್ತು ಅನುಮೋದನಾ ಕೇಂದ್ರ) ಅನುಮೋದನೆಯನ್ನು ಪಡೆಯಬೇಕಾಗುತ್ತದೆ. ಈ ಅನು...