ಭಾರತ, ಜೂನ್ 19 -- ವಾರ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. 2025ರ ಜೂನ್ 22ರ ಭಾನುವಾರದಿಂದ 28ರ ಶನಿವಾರದವರಿಗೆ ಧನು, ಮಕರ, ಕುಂಭ ಹಾಗೂ ಮೀನ ರಾಶಿಯವರ ವಾರ ಭವಿಷ್ಯ ಇಲ್ಲಿದೆ.

ನಿಮ್ಮಲ್ಲಿ ಧೈರ್ಯ ಸಾಹಸದ ಗುಣ ಇರುರುತ್ತದೆ. ಮಕ್ಕಳ ವಿಚಾರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಎದುವಾಗುವ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಬುದ್ದಿವಂತಿಗೆಯಿಂದ ವರ್ತಿಸುವಿರಿ. ಕುಟುಂಬದ ವಿಚಾರದಲ್ಲಿ ಸ್ವತಂತ್ರವಾಗಿ ತೀರ್ಮಾನವನ್ನು ಕೈಗೊಳ್ಳುವಿರಿ. ಉದ್ಯೋಗದಲ್ಲಿ ಅನಗತ್ಯ ವಾದ ವಿವಾದಗಳು ಎದುರಾಗುತ್ತದೆ. ಆದರೆ ಅಧಿಕಾರಿಗಳು ನಿಮ್ಮ ಸಹಾಯಕ್ಕೆ ನಿಲ್ಲುತ್ತಾರೆ. ಕೋಪ ತೊರೆದು ಸಂತಸದಿಂದ ಎಲ್ಲರ ಜೊತೆ ವರ್ತಿಸುವಿರ...