ಭಾರತ, ಮಾರ್ಚ್ 10 -- ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ನಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಮ್ ಇಂಡಿಯಾ, ಐತಿಹಾಸಿಕ ಮೂರನೇ ಟ್ರೋಫಿಗೆ ಮುತ್ತಿಕ್ಕಿತು. 12 ವರ್ಷಗಳ ನಂತರ ಅಂದರೆ 2013ರ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡ ಟೀಮ್ ಇಂಡಿಯಾ ಹಲವು ದಾಖಲೆಗಳಿಗೂ ಪಾತ್ರವಾಯಿತು. 252 ರನ್‌ಗಳ ಗುರಿಯನ್ನು ನಾಲ್ಕು ವಿಕೆಟ್‌ ಬಾಕಿ ಇರುವಂತೆ ಬೆನ್ನಟ್ಟಿದ ಮೆನ್ ಇನ್ ಬ್ಲೂ, ತಂಡಕ್ಕೆ ಇದು ಸಮಗ್ರ ಜಯವಾಗಿತ್ತು. ಅಜೇಯವಾಗಿ ಪ್ರಶಸ್ತಿ ಗೆದ್ದುಕೊಂಡ ಭಾರತ, 50 ಓವರ್‌ಗಳ ಐಸಿಸಿ ಪ್ರಶಸ್ತಿ ಬರ ಕೊನೆಗೊಳಿಸಿತು.

ರವೀಂದ್ರ ಜಡೇಜಾ ಗೆಲುವಿನ ಬೌಂಡರಿ ಸಿಡಿಸುತ್ತಿದ್ದಂತೆ ಭಾರತದ ಆಟಗಾರರು ಮೈದಾನಕ್ಕೆ ತೆರಳಿ ಸಂಭ್ರಮಿಸಿದರು. ಫೋಟೋಗೆ ಪೋಸ್ ಕೊಟ್ಟರು. ಆಟಗಾರರೊಂದಿಗೆ ಪರಸ್ಪರ ಸಂಭ್ರಮಿಸಿದರು. ತಮ್ಮ ಕುಟುಂಬ ಸದಸ್ಯರೊಂದಿಗೆ ಸಂತಸದ ಕ್ಷಣಗಳನ್ನು ಕಳೆದರು. ಭಾರತದ ಆಟಗಾರರು ಚಾಂಪಿಯನ್ಸ್ ಟ್ರೋಫಿ ಗೆಲುವನ್ನು ಆಚರಿಸಿದಾಗ ದುಬೈನಲ್ಲಿ ಹಬ್ಬದ ವಾತಾವರಣ ನಿರ್ಮಾಣ...