ಭಾರತ, ಮೇ 14 -- ಮನುಷ್ಯ ಮತ್ತು ನಾಯಿಗಳಿಗೆ ಅವಿನಾಭಾವ ಸಂಬಂಧ. ಸ್ನೇಹ ಮತ್ತು ಪ್ರೀತಿಯನ್ನು ಹಂಚಿಕೊಳ್ಳುತ್ತವೆ. ಬಹುತೇಕ ಎಲ್ಲರ ಮನೆಗಳಲ್ಲಿ, ಜೀವನ ಹಾಗೂ ಭಾವನೆಗಳನ್ನು ಪ್ರೀತಿಯ ಪ್ರಾಣಿಗಳೊಂದಿಗೆ ಹಂಚಿಕೊಳ್ಳುತ್ತೇವೆ. ಮನುಷ್ಯ ಮತ್ತು ಸಾಕು ಪ್ರಾಣಿಗಳ ನಡುವಿನ ಸಂಬಂಧವನ್ನು ವರ್ಣಿಸಲಾಗುದು. ಅಷ್ಟರ ಮಟ್ಟಿಗೆ ಸಂಬಂಧವನ್ನು ಹೊಂದಿರುತ್ತವೆ. ನಾವು ಹೇಗೆ ಇರುತ್ತವೆ, ಹೇಗೆ ಪ್ರತಿಕ್ರಿಯಿಸುತ್ತೇವೆ ಎಂಬುದನ್ನು ನಾಯಿಗಳು ಗಮನಿಸುತ್ತವೆ. ಅವು ಕೂಡ ನಮ್ಮ ಮನಸ್ಥಿತಿಗೆ ತಕ್ಕಂತ ಪ್ರತಿಕ್ರಿಯಿಸುತ್ತವೆ ಎಂದು ಅಧ್ಯಯಗಳಿಂದ ತಿಳಿದು ಬಂದಿದೆ. ಶ್ವಾನಗಳಲ್ಲಿ ಇರುವಂತಹ 5 ಅಧ್ಯಾತ್ಮಿಕ ಮಹಾಶಕ್ತಿಗಳ ಬಗ್ಗೆ ತಿಳಿಯೋಣ.

ನಾವು ಸಂತೋಷವಾಗಿದ್ದೇವೆಯೇ, ದುಃಖದಲ್ಲಿದ್ದೇವೆಯೇ ಅಥವಾ ಅಸಮಾಧಾನಗೊಂಡಿದ್ದೇವೆಯೇ ಎಂದು ತಿಳಿಯಲು ಶ್ವಾನಗಳು ನಮ್ಮ ಮುಖಭಾವಗಳನ್ನು ನೋಡುತ್ತವೆ. ನಮ್ಮ ಮನಸ್ಥಿತಿಯನ್ನು ಊಹಿಸಲು ನಾವು ಹೇಗೆ ನಿಲ್ಲುತ್ತೇವೆ, ಚಲಿಸುತ್ತೇವೆ ಅಥವಾ ವರ್ತಿಸುತ್ತೇವೆ ಎಂಬುದನ್ನು ಸಹ ಗಮನಿಸುತ್ತವೆ. ನಮ್ಮ ಧ್ವನಿಯ ಆಧಾರದ ಮ...