Bangalore, ಮಾರ್ಚ್ 26 -- ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) 2023-24ರ ಆವೃತ್ತಿಗೆ ವಾರ್ಷಿಕ ಕೇಂದ್ರೀಯ ಒಪ್ಪಂದವನ್ನು ಘೋಷಿಸಿದಾಗ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು. ಆ ಪಟ್ಟಿಯಲ್ಲಿ ಶ್ರೇಯಸ್ ಅಯ್ಯರ್ ಮತ್ತು ಇಶಾನ್ ಕಿಶನ್ ಹೆಸರೇ ಇರಲಿಲ್ಲ. ಬಿಸಿಸಿಐ ಆದೇಶಗಳನ್ನು ಧಿಕ್ಕರಿಸಿದ ಕಾರಣ, ಇಬ್ಬರನ್ನೂ ಕಾಂಟ್ರಾಕ್ಟ್​ನಿಂದ ಹೊರಗಿಡಲಾಗಿತ್ತು. ದೇಶೀಯ ಕ್ರಿಕೆಟ್‌ಗೆ ಆದ್ಯತೆ ನೀಡದ ಕಾರಣ ಬೋರ್ಡ್ ಅವರಿಗೆ ಶಿಕ್ಷೆ ವಿಧಿಸಲಾಗಿತ್ತು.

ಆದಾಗ್ಯೂ, ಈಗ ಬಿಸಿಸಿಐನಿಂದ ಅಯ್ಯರ್ ಮತ್ತು ಇಶಾನ್​ಗೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ. ಇಬ್ಬರಿಗೂ ಮತ್ತೆ ಕೇಂದ್ರೀಯ ಒಪ್ಪಂದ ಸಿಗುವ ನಿರೀಕ್ಷೆಯಿದೆ. ಆದರೆ ಹಲವು ಆಟಗಾರರನ್ನು ಈ ವಾರ್ಷಿಕ ಒಪ್ಪಂದದಿಂದ ಹೊರಗಿಡಬಹುದು. ಶ್ರೇಯಸ್ ಅಯ್ಯರ್ ಪ್ರಸ್ತುತ ಭಾರತದ ಏಕದಿನ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಆದರೆ ಇಶಾನ್ ಕಿಶನ್ ಐಪಿಎಲ್ 2025ರ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿ ಮತ್ತೆ ಭಾರತ ತಂಡಕ್ಕೆ ಮರಳುವಿಕೆಯ ಸಿಗ್ನಲ್ ನೀಡಿದ್ದಾರೆ.

ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾ...