ಭಾರತ, ಮಾರ್ಚ್ 28 -- ಹಿಂದೂ ಕಾಲಗಣನೆ ಪದ್ಧತಿ ಪ್ರಕಾರ ಯಾದಿಯಂತೆ 60 ಸಂವತ್ಸರಗಳ ಪುನರಾವರ್ತನೆಯಾಗುತ್ತದೆ. ಈಗ 60 ಸಂವತ್ಸರದ ಬಳಿಕ ಶ್ರೀ ವಿಶ್ವಾವಸು ಸಂವತ್ಸರ ಬಂದಿದೆ. 1965ರಲ್ಲಿ ವಿಶ್ವಾವಸು ಸಂವತ್ಸರ ಬಂದಿತ್ತು. ಅಂದು ಪಾಕಿಸ್ತಾನದ ಅತಿಕ್ರಮಣ, ಯುದ್ಧವನ್ನು ಎದುರಿಸಬೇಕಾಗಿ ಬಂದಿತ್ತು. 1947-48ರ ಭಾರತ- ಪಾಕ್ ಯುದ್ಧದ ಬಳಿಕ ಎರಡನೇ ಭಾರಿ ಭಾರತ - ಪಾಕ್ ಯುದ್ಧ 1965ರಲ್ಲಿ ನಡೆಯಿತು. ಭಾರತದ ಇತಿಹಾಸ ಪುಟಗಳನ್ನು ಗಮನಿಸಿದರೆ ಆ ವಿಶ್ವಾವಸು ಸಂವತ್ಸರ ಬಲಶಾಲಿ ಭಾರತವನ್ನು ಜಗತ್ತಿನೆದುರು ಅನಾವರಣಗೊಳಿಸಿತ್ತು. ಅಂದಿನ ಬಹುಮುಖ್ಯ ವಿದ್ಯಮಾನದ ಕಡೆಗೊಂದು ನೋಟ ಹರಿಸೋಣ.

ಭಾರತದ ಮಟ್ಟಿಗೆ 1965ರ ಶ್ರೀ ವಿಶ್ವಾವಸು ಸಂವತ್ಸರ ಹೇಗಿತ್ತು ಎಂದರೆ, 1962ರ ಚೀನಾ ಭಾರತ ಯುದ್ಧದ ನಾಶ ನಷ್ಟಗಳಿಂದ ಇನ್ನೂ ಚೇತರಿಸಿಕೊಂಡಿರಲಿಲ್ಲ. ಆ ಸಂದರ್ಭದ ಲಾಭ ಪಡೆದುಕೊಂಡು ಜಮ್ಮು ಮತ್ತು ಕಾಶ್ಮೀರವನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳಲು ಬಯಸಿತ್ತು. ಈ ಅವಧಿಯಲ್ಲಿ ಪಾಕಿಸ್ಥಾನ ಮತ್ತು ಚೀನಾ ಗೆಳೆತನ ಹೆಚ್ಚಾಗಿತ್ತು. 1962ರ ಯುದ್ಧದಲ್ಲಿ ...