ಭಾರತ, ಮಾರ್ಚ್ 9 -- ಗ್ರಹಣಗಳು ನಮ್ಮ ಜೀವನದಲ್ಲಿ ಬಹುಮುಖ್ಯವಾದ ಬದಲಾವಣೆಗಳಿಗೆ ಕಾರಣವಾಗುತ್ತವೆ. ಗ್ರಹಣಗಳಲ್ಲಿ ಎರಡು ವಿಧಗಳಿವೆ. ರಾಹುಗ್ರಸ್ತ ಗ್ರಹಣ ಮತ್ತು ಕೇತುಗ್ರಸ್ತ ಗ್ರಹಣ. ರಾಹುಗ್ರಸ್ತ ಸೂರ್ಯಗ್ರಹಣವು ಇವು ಆ ಕ್ಷಣದಲ್ಲಿಯೇ ತನ್ನ ಪ್ರಭಾವವನ್ನು ಬೀರುತ್ತದೆ. ಇದು ಪ್ರತಿಯೊಬ್ಬರ ಜೀವನದಲ್ಲಿ ಪ್ರತ್ಯೇಕವಾದ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೇತುಗ್ರಸ್ತ ಸೂರ್ಯ ಗ್ರಹಣದಿಂದ ದೀರ್ಘಕಾಲದ ಅಡ್ಡಪರಿಣಾಮಗಳಿರುತ್ತವೆ. ಇದರಿಂದ ಕೆಲವರಿಗೆ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಆರೋಗ್ಯದಲ್ಲಿ ತೊಂದರೆ ಎದುರಾಗುತ್ತದೆ. ಕುಟುಂಬದಲ್ಲಿ ಉತ್ತಮ ಹೊಂದಾಣಿಕೆ ಇರುವುದಿಲ್ಲ. ಅಧಿಕಾರಿಗಳ ಸಹಾಯ. ಸಹಕಾರ ದೊರೆಯುವುದಿಲ್ಲ. ಇವು ಸೂರ್ಯಗ್ರಹಣದ ಕಾರಣ ಉಂಟಾಗುವ ಸಾಮಾನ್ಯ ತೊಂದರೆಗಳು.

ರಾಹುಗ್ರಸ್ತ ಚಂದ್ರಗ್ರಹಣದ ಕಾರಣದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಇದರಿಂದ ಸ್ತ್ರೀಯರಿಗೆ ಹೆಚ್ಚಿನ ತೊಂದರೆ ಉಂಟಾಗುತ್ತದೆ. ಬೇರೆಯವರನ್ನು ಅಪಾರ್ಥಮಾಡಿಕೊಳ್ಳುವುದೇ ಹೆಚ್ಚು. ರಾಹುವಿನ ಪ್ರಭಾವದ ಕಾರಣ ಬೇಗನೆ ಬೇರೆಯವರ ಪ್ರಭಾವಕ್ಕೆ ಮಣಿಯುತ್ತ...