ಭಾರತ, ಮೇ 10 -- ಶ್ರೀ ವಿಶ್ವಾವಸು ಸಂವತ್ಸರದ ಫಲಾಫಲಗಳನ್ನು ಗಮನಿಸುವಾಗ ಕಳೆದ ಎರಡು ಶ್ರೀವಿಶ್ವಾವಸು ಸಂವತ್ಸರ ಭಾರತ ಮತ್ತು ಸುತ್ತಮುತ್ತಲಿನ ಭೌಗೋಳಿಕ ಪ್ರದೇಶದ ಮೇಲೆ ಪರಿಣಾಮ ಬೀರುವ ವಿದ್ಯಮಾನಗಳು ಘಟಿಸಿರುವುದು ಗಮನಸೆಳೆಯುತ್ತದೆ. ಪ್ರಸ್ತುತ ನಾವು ಶ್ರೀ ವಿಶ್ವಾವಸು ಸಂವತ್ಸರದ ಕಾಲಘಟ್ಟದಲ್ಲಿದ್ದೇವೆ. ಇದಕ್ಕೂ ಮೊದಲು ಶ್ರೀ ವಿಶ್ವಾವಸು ಸಂವತ್ಸರ 1905ರಲ್ಲಿ ಬಂದಾಗ ಬಂಗಾಳ ವಿಭಜನೆ ಆಗಿತ್ತು. 1965ರಲ್ಲಿ ಬಂದಾಗ ಪಾಕಿಸ್ತಾನ ಯುದ್ಧಕ್ಕೆರಗಿತ್ತಾದರೂ, ಭಾರತದ ಯುದ್ಧ ಟಾಂಕ್‌ಗಳು ಅದರ ಬೆನ್ನಹುರಿಯಲ್ಲಿ ನಡುಕ ಹುಟ್ಟಿಸಿದ್ದವು. ಈಗ 2025ರ ಶ್ರೀ ವಿಶ್ವಾವಸು ಸಂವತ್ಸರದಲ್ಲಿ ಮತ್ತೆ ಪಾಕಿಸ್ತಾನ ಕಾಲ್ಕೆರೆದು ಭಯೋತ್ಪಾದನೆ ಮೂಲಕ ಛಾಯಾ ಸಮರಕ್ಕೆ ಬಂದ ಕಾರಣ ಭಾರತದ ಆಪರೇಷನ್ ಸಿಂದೂರ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಇತಿಹಾಸವನ್ನು ನೆನಪಿಸಿಕೊಂಡು ಸದ್ಯದ ಪರಿಸ್ಥಿತಿ, ಸನ್ನಿವೇಶವನ್ನು ಅರ್ಥಮಾಡಿಕೊಳ್ಳಲು ನೆರವಾಗುವ ವಿಚಾರಗಳು ಇಲ್ಲಿವೆ.

ಹಿಂದೂ ಕಾಲಗಣನೆ ಪದ್ಧತಿ ಪ್ರಕಾರ ಯಾದಿಯಂತೆ 60 ಸಂವತ್ಸರಗಳ ಪುನರಾವರ್ತನೆಯಾಗ...