ಭಾರತ, ಮಾರ್ಚ್ 14 -- ಶ್ರೀ ಮಹಾಮೃತ್ಯುಂಜಯ ಮಂತ್ರಕ್ಕೆ ವಿಶೇಷವಾದ ಶಕ್ತಿ ಇದೆ. ಈ ಮಂತ್ರದ ಸಹಾಯದಿಂದ ರಚಿಸಿದ ಯಂತ್ರವು ಉತ್ತಮ ಫಲಗಳನ್ನು ಮಾತ್ರವಲ್ಲದೆ ನಿತ್ಯಜೀವನದಲ್ಲಿ ಮಹತ್ತರ ಬದಲಾವಣೆಗಳನ್ನು ಸಹ ನೀಡುತ್ತದೆ. ಈ ಯಂತ್ರದ ಬಿಂದು ಅಥವಾ ಕೇಂದ್ರಭಾಗದಲ್ಲಿ 'ಓಂ'ಕಾರ ಇರುತ್ತದೆ. ಶ್ರೀ ಪರಮೇಶ್ವರನಿಗೆ ಇಷ್ಟವಾದ ಮಂತ್ರವಾಗಿದೆ. ಇದರ ಪರಮಾರ್ಥವನ್ನು ತಿಳಿಸಲು ಸಾಕ್ಷಾತ್ ಬ್ರಹ್ಮದೇವನಿಗೆ ಸಾಧ್ಯವಾಗುವುದಿಲ್ಲ. ಆ ಸಂದರ್ಭದಲ್ಲಿ ಶ್ರೀಸುಬ್ರಹ್ಮಣ್ಯಸ್ವಾಮಿಯು ಪರಮೇಶ್ವರನಿಗೆ ತಿಳಿಸುತ್ತಾನೆ. ಓಂಕಾರದಲ್ಲಿ ಸಕಲ ಲೋಕಗಳ ವಿಚಾರಗಳು ಇದರಲ್ಲಿ ಅಡಕವಾಗಿವೆ. ಇದರ ನಂತರ ಪಂಚಭುಜಾಕೃತಿ ಇರುತ್ತದೆ. ಇದು ಪಂಚ ದಾತು ಮತ್ತು ಪಂಚಭೂತಗಳನ್ನು ಸೂಚಿಸುತ್ತದೆ. ಈ ಯಂತ್ರವು ಋಷಿಮುನಿಗಳಿಂದ ಬಳುವಳಿಯಾಗಿ ಜೋತಿಷ್ಯ ವಿದ್ವಾಂಸರಿಗೆ ದೊರೆತ ಕಾಣಿಕೆಯಾಗಿದೆ. ಪಂಚ ದಾತುಗಳಿಂದ ರಕ್ಷಣೆ ದೊರೆತರೆ, ಪಂಭೂತಗಳಿಂದ ಉಂಟಾಗಬಹುದಾದ ಆಪತ್ತಿನಿಂದ ಪಾರಾಗಲು ಸಾಧ್ಯವಾಗುತ್ತದೆ. ಈ ಪಂಚಭುಜಾಕೃತಿಯ ಅಂಚಿನಲ್ಲಿ ಓಂ ನಮಃ ಶಿವಾಯ ಎಂಬ ಮಂತ್ರವನ್ನು ಬರೆಯಲಾಗ...