Bangalore, ಜನವರಿ 31 -- ಮಂಗಳೂರು: ಇದೇ ಜನವರಿ 29ರ ಬುಧವಾರ ಸಂಜೆ ವಿರಳವೂ ಆಗಿರುವ ಬ್ರಹ್ಮರಾಕ್ಷಸ ಉಚ್ಚಾಟನೆಯು ಧಾರ್ಮಿಕ ವಿಧಿವಿಧಾನದೊಂದಿಗೆ ಮಂಗಳೂರಿನ ಕೊಟ್ಟಾರ ಬಳಿಯ ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದಲ್ಲಿ ನಡೆಯಿತು. ದೇರೆಬೈಲಿನ ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯದ ಚಿಂತನೆ ನಡೆಸುತ್ತಿದ್ದ ಆಡಳಿತ ಮಂಡಳಿ ತಂತ್ರಿಗಳಿಂದ ಪ್ರಶ್ನಾಚಿಂತನೆ ಇಡಲಾಗಿತ್ತು. ಜೀರ್ಣೋದ್ಧಾರಕ್ಕೂ ಮುನ್ನ ಇಲ್ಲಿರುವ ಬ್ರಹ್ಮರಾಕ್ಷಸ ಹಾಗೂ ಪ್ರೇತಗಳ ಉಚ್ಚಾಟನೆ ಮಾಡಬೇಕು. ಇಲ್ಲವಾದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಅಡೆತಡೆ ಉಂಟಾಗಬಹುದು ಎನ್ನಲಾಗಿತ್ತು. ಅದರಂತೆ ಅಮಾವಾಸ್ಯೆಯ ಮಧ್ಯರಾತ್ರಿ ಈ ಪ್ರಕ್ರಿಯೆ ನಡೆಯಿತು.

ಊರ ಜನರು ಅಗೋಚರವಾಗಿ ಆ ಪ್ರದೇಶಗಳಲ್ಲಿ ಅಲೆದಾಡುವ ಬ್ರಹ್ಮರಾಕ್ಷಸನ ಉಚ್ಚಾಟನೆಯ ವಿಶೇಷ ದೃಶ್ಯವನ್ನು ಕಣ್ತುಂಬಿಕೊಳ್ಳಲೆಂದೇ ರಾತ್ರಿ 10 ಗಂಟೆಗೂ ಮೊದಲೇ ದೈವಸ್ಥಾನದಲ್ಲಿ ಜನರು ಸೇರಿದ್ದರು. ಪ್ರತೀ ಮನೆಯಿಂದಲೂ ಉಚ್ಚಾಟನೆಗೆ ಬೇಕಿದ್ದ ಕೋಳಿ, ತೆಂಗಿನಕಾಯಿ, ತೆಂಗಿನಗರಿಯ ಸೂಟೆಗಳನ್ನು ಹರಕ...