Bengaluru, ಮಾರ್ಚ್ 24 -- Srisailam Temple: ಭಾರತದಲ್ಲಿನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಶ್ರೀಶೈಲಂನ ಮಲ್ಲಿಕಾರ್ಜುನ ದೇವಾಲಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯು 'ಶ್ರೀಶೈಲಂ ಯುಗಾದಿ ಮಹೋತ್ಸವ' ನಡೆಯುತ್ತಿದೆ. 2025ರ ಮಾರ್ಚ್ 27 ರಿಂದ 31 ರವರಿಗೆ ನಡೆಯಲಿರುವ ಮಹೋತ್ಸವದಲ್ಲಿ ಕರ್ನಾಟಕ, ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಾರೆ. ಈಗಾಗಲೇ ನೂರಾರು ಮಂದಿ ಪಾದಯಾತ್ರೆ ಮೂಲಕ ನಲ್ಲಮಲ ಅರಣ್ಯದ ಮೂಲಕ ಶ್ರೀಶೈಲಂನತ್ತ ಹೊರಟ್ಟಿದ್ದಾರೆ. ಶ್ರೀಶೈಲಂಗೆ ಬರುತ್ತಿರುವ ಎಲ್ಲಾ ಭಕ್ತರಿಗೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆಯೊಂದನ್ನು ನೀಡಿದೆ.

ಭಕ್ತರ ವಿಚಾರವಾಗಿ ಮಾತನಾಡಿರುವ ದೇವಾಲಯದ ಅಧಿಕಾರಿಗಳು ಪ್ರಮುಖ ಸೂಚನೆಗಳನ್ನು ನೀಡಿದ್ದಾರೆ. ಶ್ರೀಶೈಲ ಮಹಾ ಕ್ಷೇತ್ರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳು ನಕಲಿ ವೆಬ್ ಸೈಟ್ ಗಳಿಗೆ ಮೋರೆ ಹೋಗಿ ಮೋಸ ಹೋಗಬಾರದು ಎಂದು ಹೇಳಿದ್ದಾರೆ. ಶ್ರೀಶೈಲಂ ದೇವಾಲಯದ ಕಾರ್ಯನಿರ್ವಣಾಧಿಕಾರಿ ಶ್ರೀನಿವಾಸ ರಾವ್ ಮಾತನಾಡಿ, ದೇವಾಲಯವು ನಡೆಸುವ ವಸತಿ ಸಂಕೀರ್ಣಗಳ ಹೆ...