Bengaluru, ಮಾರ್ಚ್ 24 -- ಶಿವರಾತ್ರಿ ಹಬ್ಬ ಮುಗಿಯುತ್ತಿದ್ದಂತೆ ಉತ್ತರ ಕರ್ನಾಟಕದ ಮಂದಿಯ ಪಾದಯಾತ್ರೆ ಆರಂಭವಾಗುವುದು ಶ್ರೀಶೈಲದ ಕಡೆಗೆ. 2025ರ ಮಾರ್ಚ್ 27 ರಿಂದ 31 ರವರಿಗೆ ಶ್ರೀಶೈಲದಲ್ಲಿ ಯುಗಾದಿ ಮಹೋತ್ಸವ ನಡೆಯುತ್ತದೆ. ಹೀಗಾಗಿ ಈ ಉತ್ಸವದಲ್ಲಿ ಭಾಗವಹಿಸಲು ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರ್ಗಿ, ಬೆಳಗಾವಿ, ಗದಗ ಹಾಗೂ ರಾಯಚೂರು ಭಕ್ತರು ಹೆಚ್ಚಾಗಿ ಪಾದಯಾತ್ರೆ ಮಾಡುತ್ತಾರೆ. ವಿಶೇಷವಾಗಿ ಕರ್ನಾಟಕದ ಗಡಿ ದಾಟಿ ಆಂಧ್ರದ ನಲ್ಲಮಲ್ಲ ಕಾಡಿನ ಮೂಲಕ ಪಾದಯಾತ್ರೆ ಕೈಗೊಂಡು ಶ್ರೀಶೈಲವನ್ನು ತಲುಪುತ್ತಾರೆ. ಶ್ರೀಶೈಲ ಯುಗಾದಿ ಮಹೋತ್ಸವದಲ್ಲಿ ಭಾಗವಹಿಸಿ, ಈ ವರ್ಷ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಕರ್ನಾಟಕದ ಭಕ್ತರು ಮಾತ್ರವಲ್ಲದೆ, ಮಹಾರಾಷ್ಟ್ರದ ಭಕ್ತರು ಕೂಡ ಈ ಸಂದರ್ಭದಲ್ಲಿ ಶ್ರೀಶೈಲಕ್ಕೆ ಆಗಮಿಸುತ್ತಾರೆ. ಇನ್ನ ಶ್ರೀಶೈಲಂ ದೇವಸ್ಥಾನ ಮತ್ತು ಜಿಲ್ಲಾಡಳಿತಗಳು ನಲ್ಲಮಲ್ಲ ಕಾಡಿನಲ್ಲಿ ನಡೆದು ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಹಲವು ರೀತಿಯ ವ್ಯವಸ್ಥೆಗಳನ್ನು ಮಾಡಿವೆ. ...