ಭಾರತ, ಮಾರ್ಚ್ 28 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಮಾರ್ಚ್ 27ರ ಸಂಚಿಕೆಯಲ್ಲಿ ಸುಬ್ಬು ಯಜಮಾನರ ಮನೆಯಿಂದ ಬಂದಾಗ ಕಾಫಿ ತರುವ ಶ್ರಾವಣಿ 'ಸುಬ್ಬು ನಿನ್ನ ಜೊತೆ ಒಂದು ವಿಚಾರ ಹೇಳಬೇಕು' ಎನ್ನುತ್ತಾಳೆ. ಸುಬ್ಬು ಕೂಡ 'ಮೇಡಂ, ನಿಮ್ಮ ಜೊತೆ ಏನೋ ಹೇಳಬೇಕು' ಎನ್ನುತ್ತಾನೆ. ಆಗ ಶ್ರಾವಣಿ 'ಸುಬ್ಬು ಅ‍ಪ್ಪ ಕಾಲ್ ಮಾಡಿದ್ರು, ಅವರು ನಮ್ಮಿಬ್ಬರನ್ನೂ ಮನೆಗೆ ಬರಲು ಹೇಳಿದ್ದಾರೆ, ನನ್ನ ಜೊತೆ ಎಷ್ಟು ಪ್ರೀತಿಯಿಂದ ಮಾತನಾಡಿದ್ರು ಗೊತ್ತಾ, ನಂಗಂತೂ ಅವರು ಮನೆಗೆ ಕರೆದಿದ್ದು ತುಂಬಾ ಖುಷಿ ಆಯ್ತು' ಎನ್ನುತ್ತಾರೆ. ಆಗ ಸುಬ್ಬು 'ಮೇಡಂ, ನಾನು ಕೂಡ ಇದನ್ನೇ ಹೇಳೋಕೆ ಬಂದಿದ್ದು. ಯಜಮಾನರು ನನಗೂ ಕೂಡ ಇದನ್ನೇ ಹೇಳಿದ್ರು 'ನಿನ್ನ ಹೆಂಡ್ತಿ ಕರ್ಕೊಂಡು' ಅಂತ ಹೇಳೋಕೆ ಬಂದವನು ಅರ್ಧಕ್ಕೆ ನಿಲ್ಲಿಸುತ್ತಾನೆ. ಆಗ ಶ್ರಾವಣಿ ಅಪ್ಪ ಏನು ಹೇಳಿದ್ರು ಹೇಳು ಅಂದ್ರೆ ಶ್ರಾವಣಿ ಮೇಡಂನ ಕರ್ಕೊಂಡು ಮನೆಗೆ ಬಾ ಅಂದ್ರು ಅನ್ನುತ್ತಾನೆ. ಆದರೆ ಶ್ರಾವಣಿ ಅವನನ್ನು ಕಾಡಿಸಿ ಅವನ ಬಾಯಿಂದ ಹೆಂಡ್ತಿನಾ ಕರ್ಕೊಂಡ...