ಭಾರತ, ಏಪ್ರಿಲ್ 19 -- Shravani Subramanya Kannada Serial: ಶ್ರಾವಣಿ ಸುಬ್ರಹ್ಮಣ್ಯ ಧಾರಾವಾಹಿ ಏಪ್ರಿಲ್‌ 18ರ ಸಂಚಿಕೆಯಲ್ಲಿ ಮುನಿಸೆಲ್ಲಾ ಮರೆತು ಒಂದಾದ ಅತ್ತೆ-ಸೊಸೆ ಉಭಯಕುಶಲೋಪರಿ ಮಾತನಾಡುತ್ತಿರುವಾಗ ಡಾಕ್ಟರ್ ಕರೆದುಕೊಂಡು ಬರಲು ಹೋಗಿದ್ದ ಸುಬ್ಬು ಮನೆಗೆ ಬರ್ತಾನೆ. ಆದರೆ ತಾವಿಬ್ಬರೂ ಒಂದಾಗಿರೋದು ಈಗಲೇ ಸುಬ್ಬುಗೆ ಗೊತ್ತಾಗೋದು ಬೇಡ ಅಂತ ವಿಶಾಲಾಕ್ಷಿ ಸೊಸೆಯ ಬಳಿ ಹೇಳುತ್ತಾರೆ. ಅಂತೆಯೇ ಅವರು ಸುಬ್ಬು ಎದುರು ನಾಟಕ ಮಾಡುತ್ತಾರೆ. ತಾಯಿ ಮಾತು ಶ್ರಾವಣಿ ಮೇಡಂಗೆ ಬೇಸರ ತರಿಸುತ್ತಿದೆ ಎಂದು ಸುಬ್ಬು ಮನದಲ್ಲೇ ಮರುಕ ಪಡುತ್ತಾನೆ. ಡಾಕ್ಟರ್ ಬಂದಾಗ ಎಲ್ಲರನ್ನೂ ಹೊರ ಹೋಗಲು ಹೇಳುತ್ತಾರೆ. ಆದರೆ ಶ್ರಾವಣಿ ತಾನು ಅತ್ತೆಯ ಬಳಿಯೇ ಇರುತೇನೆ ಎಂದು ಹಟ ಮಾಡಿ ಅಲ್ಲಿಯೇ ಇರುತ್ತಾಳೆ.

ವಿಶಾಲಾಕ್ಷಿ ಮನ ಒಲಿಸಿಕೊಂಡರೆ ತಾನು ಈ ಮನೆಗೆ ಬರುವುದು ಸುಲಭ ಎಂದು ಪ್ಲಾನ್ ಮಾಡುವ ಶ್ರೀವಲ್ಲಿ ಜ್ವರ ಬಂದ ಅವಳ ಸೇವೆ ಮಾಡುವ ನೆಪದಲ್ಲಿ ಸುಬ್ಬು ಮನೆಗೆ ಬರುತ್ತಾಳೆ. ಮನೆಯೊಳಗೆ ಬಂದ ಅವಳು ಕೋಣೆಯ ಬಾಗಿಲ ಬಳಿ ನಿಂತಿದ್ದ ಸುಬ್ಬು ಬಳಿ ...