Hubballi, ಏಪ್ರಿಲ್ 20 -- ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸ್‌ ಇನ್ಸ್‌ಪೆಕ್ಟರ್ ಆಗಿರುವ ಮುರುಗೇಶ ಚನ್ನಣ್ಣವರ, ತಮ್ಮ ಸಾಹಸಿ ತಂಡದೊಂದಿಗೆ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದು ಒಬ್ಬ ಪೊಲೀಸ್‌ ಅಧಿಕಾರಿಯಾಗಿ ಅಲ್ಲ. ಬದಲಿಗೆ ಸಮುದ್ರ ಈಜುವ ಸಾಹಸಮಯ ಕ್ರೀಡೆಯಿಂದ. ಬರೋಬ್ಬರಿ 28 ಕಿ.ಮೀ ದೂರ ಕಡಲೀಜಿ ದಾಖಲೆ ಬರೆದಿದ್ದಾರೆ. ಇವರಿಗೆ ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ ಸೇರಿದಂತೆ ಹಲವರು ಸಾಥ್‌ ನೀಡಿದ್ದಾರೆ

ಕ್ರೀಡೆ ಮನುಷ್ಯನ ಆರೋಗ್ಯ ಸುಧಾರಿಸುತ್ತದೆ. ಸದೃಢ ಮತ್ತು ಆರೋಗ್ಯವಂತ ದೇಹಕ್ಕೆ ಕ್ರೀಡೆ ಅತ್ಯಗತ್ಯ. ಕೆಲವು ಕ್ರೀಡೆಗಳಿಗೆ ಶಕ್ತಿ ಮಾತ್ರವಲ್ಲದೆ ಯುಕ್ತಿಯ ಅಗತ್ಯವಿದೆ. ಅದರಲ್ಲಿ ಈಜು ಕೂಡಾ ಒಂದು. ಶಕ್ತಿ, ಯುಕ್ತಿಯ ಜೊತೆಗೆ ತಾಳ್ಮೆಯ ಅಗತ್ಯವಿರುವ ಈಜಿನ ಮೂಲಕ ಮುರುಗೇಶ ಚನ್ನಣ್ಣವರ ದಾಖಲೆ ಮಾಡಿದ್ದಾರೆ. ಇವರ ಸಾಧನೆಯ ಶಿಖರವೇರಲು ತಾಳ್ಮೆಯ ಜೊತೆಗೆ ಸತತ ಪರಿಶ್ರಮ ಬೇಕಾಗಿತ್ತು.

ಹುಬ್ಬಳ್ಳಿ ಗ್ರಾಮೀಣ ಠಾಣೆಯ ಅಧಿಕಾರಿಯಾಗಿರುವ ಇವರು ಹೊಸ ಮೈಲುಗಲ್ಲು ಸಾಧಿಸಿದ್ದಾರೆ. ರಾಮಸೇತು ಈಜುವ ಮೂಲಕ ...