Bengaluru, ಮಾರ್ಚ್ 28 -- Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಗುರುವಾರ ಮಾರ್ಚ್ 27ರ ಸಂಚಿಕೆಯಲ್ಲಿ ಭಾವನಾಗೆ ಕಳೆದುಕೊಂಡ ಮಾಂಗಲ್ಯ ಸರ ಮತ್ತೆ ಸಿಕ್ಕಿದೆ. ಭಾವನಾ ದೇವಸ್ಥಾನಕ್ಕೆ ಹೋಗಿದ್ದ ಸಂದರ್ಭದಲ್ಲಿ ಸಿದ್ದೇಗೌಡರು ಮಾಂಗಲ್ಯ ಸರ ಹುಡುಕಿಕೊಂಡು ಬಂದು ಕೊಟ್ಟಿದ್ದಾರೆ. ನಂತರ ಅದನ್ನು ಸಿದ್ದೇಗೌಡನೇ ಭಾವನಾಗೆ ಕಟ್ಟಿದ್ದಾನೆ. ಬಳಿಕ ಅವರಿಬ್ಬರೂ ಹೊರಗಡೆ ಸುತ್ತಾಡಲು ಹೋಗಿದ್ದಾರೆ. ಅಲ್ಲಿ ಸಿದ್ದೇಗೌಡ, ಭಾವನಾ ಬಳಿ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾನೆ. ಭಾವನಾ ಕೂಡ ಅವನ ಬಳಿ ಪ್ರೀತಿ ಹಂಚಿಕೊಂಡಿದ್ದಾಳೆ. ಇಬ್ಬರೂ ಖುಷಿಯಾಗಿ ಸುತ್ತಾಡಿ, ಮತ್ತೆ ರೆಸಾರ್ಟ್‌ಗೆ ಮರಳಿ ಬಂದಿದ್ದಾರೆ. ನಂತರ ಭಾವನಾ, ಸಿದ್ದುವನ್ನು ತನ್ನ ಜೊತೆಗೇ ಮಲಗಬೇಕು ಎಂದು ಒತ್ತಾಯಿಸಿದ್ದಾಳೆ.

ಇತ್ತ ಪ್ರಕಾಶ, ಮರಿಗೌಡರ ಬಳಿ ಮಾತನಾಡಿ, ಅಕ್ಸಿಡೆಂಟ್ ವಿಚಾರವಾಗಿ ಓರ್ವ ವ್ಯಕ್ತಿಯನ್ನು ಸರೆಂಡರ್ ಆಗಲು ಹೇಳಿದ್ದೇನೆ, ಅವನು ಬಂದ ಕೂಡಲೇ ಎಲ್ಲವನ್ನೂ ಸರಿಪಡಿಸಿ, ಈ ಕೇಸ್ ಕ್ಲೋಸ್ ಮಾಡಿಸೋಣ ಎಂದಿದ್ದಾನೆ. ಜತೆಗೆ ಜವರೇಗೌಡ್ರು ...