Srirangapatna, ಜನವರಿ 27 -- ಶ್ರೀರಂಗಪಟ್ಟಣ: ಕರ್ನಾಟಕದ ದ್ವೀಪ ನಗರ, ಕಾವೇರಿ ತೀರದ ಶ್ರೀರಂಗಪಟ್ಟಣದಲ್ಲಿ ಮುಂದಿನ ತಿಂಗಳು ಒಂದು ಲಕ್ಷಕ್ಕೂ ಅಧಿಕ ಭಕ್ತರು ಪುಣ್ಯಸ್ನಾನ ಮಾಡಲಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿ ನದಿ ತೀರದ ಪ್ರಸಿದ್ದ ನಿಮಿಷಾಂಬ ದೇವಸ್ಥಾನದಲ್ಲಿ ವಿಶೇಷ ಸ್ನಾನ ಹಾಗೂ ಪೂಜೆಗಳು ನಡೆಯಲಿವೆ. ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11 ಮತ್ತು 12 ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯಲ್ಲಿ ಈ ಪುಣ್ಯ ಸ್ನಾನವನ್ನು ಭಕ್ತರು ಮಾಡುವರು. ನಾಲ್ಕು ನೂರು ವರ್ಷಕ್ಕೂ ಅಧಿಕ ಇತಿಹಾಸ ಇರುವ ನಿಮಿಷಾಂಬ ದೇಗುಲಕ್ಕೆ ನಾಡಿನ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ಪೂಜೆ ಸಲ್ಲಿಸುವುದು ನಡೆದುಕೊಂಡು ಬಂದಿದೆ. ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ.

ಈ ದೇವಾಲಯವನ್ನು ಸುಮಾರು 400 ವರ್ಷಗಳ ಹಿಂದೆ ಮೈಸೂರಿನ ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್ ಸಮಯದಲ್ಲಿ ಸ್ಥಾಪಿಸಲಾಯಿತು. ಆಗಿನಿಂದಲೂ ಕಾವೇರಿ ತಟದಲ್ಲಿರುವ ನಿಮಿಷಾಂಬ ದೇವಿ ಶಕ್ತಿಪೀಠವಾಗಿಯೇ ಗುರುತಿಸಿಕೊಂಡಿದೆ. ಇತ್ತೀಚಿನ...