ಭಾರತ, ಮಾರ್ಚ್ 3 -- ಯಂತ್ರಗಳಲ್ಲಿ ಇರುವುದು ಕೇವಲ ರೇಖೆಗಳು, ಸಂಖ್ಯೆಗಳು, ಬಿಂದು ಮತ್ತು ಸಂಸ್ಕೃತದಲ್ಲಿನ ಮಂತ್ರಗಳ ಕೆಲ ಪದಗಳು, ಅಕ್ಷರಗಳು ಅಥವಾ ಚಿಕ್ಕದಾದ ವಾಕ್ಯಗಳು. ಕೇವಲ ರೇಖೆಗಳಿರುವ ಯಂತ್ರವನ್ನು ಬಳಿಯಲ್ಲಿ ಇಟ್ಟುಕೊಳ್ಳಬಹುದು. ಸಂಖ್ಯೆಗಳಿಂದ ಕೂಡಿದ ಯಂತ್ರವನ್ನೂ ಸಹ ಬಳಿ ಇರಿಸಬಹುದು. ಆದರೆ ಬೀಜಾಕ್ಷರಗಳು ಇರುವ ಯಂತ್ರವನ್ನು ಪೂಜಿಸುವುದು ಬಲುಮುಖ್ಯ. ಶ್ರೀಯಂತ್ರವನ್ನು ಹಣಕಾಸಿನ ತೊಂದರೆ ಇರುವವರು ಬಳಸಬೇಕು. ಇದರಿಂದ ಹಣದ ಕೊರತೆ ಕಡಿಮೆ ಆಗುತ್ತದೆ. ಹಣದ ವ್ಯವಹಾರದಲ್ಲಿ ಪ್ರಯೋಜನಕಾರಿ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಜನ್ಮಕುಂಡಲಿಯಲ್ಲಿ ಬುಧ ಮತ್ತು ಶುಕ್ರಗ್ರಹಗಳು ಸಶಕ್ತರಾದಲ್ಲಿ ಶ್ರೀಯಂತ್ರದಿಂದ ವಿಶೇಷವಾದ ಫಲಗಳು ದೊರೆಯುತ್ತವೆ.

ಶ್ರೀಚಕ್ರವು ಶ್ರೀಯಂತ್ರದ ಮತ್ತೊಂದು ರೂಪವಾಗಿದೆ. ಶ್ರೀಚಕ್ರವನ್ನು ಶ್ರೀಸೂಕ್ತದ ಮೂಲಕ ಪೂಜಿಸಬೇಕು. ದೇವರಕೋಣೆಯಲ್ಲಿ ಶ್ರೀಚಕ್ರವನ್ನು ಪ್ರತಿಷ್ಠಾಪಿಸಬೇಕು. ಶುಕ್ರವಾರ, ಬುಧವಾರಗಳಂದು ತಪ್ಪದೇ ಶ್ರೀಚಕ್ರವನ್ನು ಪೂಜಿಸಬೇಕು. ಭರಣಿ, ಪುಬ್ಬ ಮತ್ತು ಪೂರ್...