ಭಾರತ, ಏಪ್ರಿಲ್ 25 -- ಬಹುಭಾಷಾ ನಟಿ, ಸಹಜ ಸುಂದರಿ ಸಾಯಿ ಪಲ್ಲವಿ ಅವರು ರಣಬೀರ್‌ ಕಪೂರ್‌ ನಟನೆಯ ನಿತೇಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಈ ಕುರಿತು ಮಾತನಾಡಿದ್ದಾರೆ. ಸಿದ್ಧಾರ್ಥ ಕಣ್ಣನ್‌ ಜತೆಗಿನ ಸಂದರ್ಶನದಲ್ಲಿ "ನಾನು ರಾಮಾಯಣ ಸಿನಿಮಾದ ಸೀತೆಯ ಪಾತ್ರಕ್ಕಾಗಿ ಅಡಿಷನ್‌ಗೆ ಹೋಗಿದ್ದೆ. ಸ್ಕ್ರೀನ್‌ ಟೆಸ್ಟ್‌ ಮಾಡಿದ್ದೆ. ಆದರೆ, ಅವಕಾಶ ಸಾಯಿ ಪಲ್ಲವಿ ಅವರಿಗೆ ದೊರಕಿತ್ತು" ಎಂದು ಹೇಳಿದ್ದಾರೆ. ಕೆಜಿಎಫ್‌ ನಟಿ ಶ್ರೀನಿಧಿ ಶೆಟ್ಟಿ ಅವರು ತೆಲುಗಿನ ಹಿಟ್‌ 3 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಾನಿ ಜತೆಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

ರಾಮಾಯಣದ ಸೀತೆ ಪಾತ್ರಕ್ಕೆ ನಿಮ್ಮನ್ನು ಆಯ್ಕೆ ಮಾಡುವ ಸಾಧ್ಯತೆ ಇತ್ತು ಎಂಬ ಪ್ರಶ್ನೆಗೆ ಶ್ರೀನಿಧಿ ಶೆಟ್ಟಿ ಉತ್ತರಿಸಿದ್ದಾರೆ. "ಈಗ ರಾಮಾಯಣ ಸಿನಿಮಾದ ಶೂಟಿಂಗ್‌ ಆರಂಭವಾಗಿದೆ. ನಾನು ಸೀತೆ ಪಾತ್ರಕ್ಕೆ ಪ್ರಯತ್ನಿಸಿದ್ದೇನಾ? ಅದನ್ನು ಹೇಳಬಹುದು ಎಂದುಕೊಂಡಿದ್...