Bengaluru, ಮಾರ್ಚ್ 14 -- Narayana Narayana: ಸಿನಿಮಾ ಮತ್ತು ಕಿರುತೆರೆ ಎರಡರಲ್ಲೂ ಗುರುತಿಸಿಕೊಂಡಿರುವ ನಟ ಮಜಾ ಟಾಕೀಸ್‌ ಖ್ಯಾತಿಯ ಪವನ್‌, ಇದೀಗ ನಾರಾಯಣ ನಾರಾಯಣ ಸಿನಿಮಾ ಮೂಲಕ ಆಗಮಿಸುತ್ತಿದ್ದಾರೆ. ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಸಿನಿಮಾ, ಇನ್ನೇನು ಬಿಡುಗಡೆಯ ಸನಿಹದಲ್ಲಿದೆ. ಟೈಟಲ್ ಮೂಲಕವೇ ಗಮನ ಸೆಳೆಯುತ್ತಿರುವ ಈ ಚಿತ್ರಕ್ಕೆ ಶ್ರೀಕಾಂತ್ ಕೆಂಚಪ್ಪ ಆಕ್ಷನ್ ಕಟ್ ಹೇಳಿದ್ದಾರೆ.

ನಾರಾಯಣ ನಾರಾಯಣ ಸಿನಿಮಾತಂಡ ಟ್ರೇಲರ್‌ ಲಾಂಚ್ ಮಾಡುವ ಮೂಲಕ ಮಾಧ್ಯಮದ ಮುಂದೆ ಹಾಜರಾಗಿತ್ತು. ಸಿನಿಮಾದ ಎರಡು ಹಾಡುಗಳು ಮತ್ತು ಟ್ರೈಲರ್ ಅನ್ನು ರಿಲೀಸ್ ಮಾಡುವ ಮೂಲಕ ಚಿತ್ರಾಭಿಮಾನಿಗಳಿಗೆ ಚಿತ್ರಮಂದಿರಕ್ಕೆ ಆಹ್ವಾನ ನೀಡಿದೆ ಚಿತ್ರತಂಡ. ಈ ಸಿನಿಮಾದಲ್ಲಿನ ಎರಡು ಸುಂದರ ಹಾಡುಗಳು ಈಗಾಗಲೇ ಪ್ರೇಕ್ಷಕರ ಗಮನ ಸೆಳೆಯುತ್ತಿವೆ. ಸತ್ಯ ರಾಧಾಕೃಷ್ಣ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಕೃಷ್ಣನ ಬಗ್ಗೆ ಇರುವ ಹಾಡು ಹಾಗೂ ಖ್ಯಾತ ಚಿತ್ರಸಾಹಿತಿ ಕವಿರಾಜ್ ಅವರು ಬರೆದಿರುವ ರೊಮ್ಯಾಂಟಿಂಕ್ ಹಾಡು ಕೇಳಲು ಇಂಪಾಗಿದ್ದು ...